ಅಭಿಷೇಕ್ ಅಂಬರೀಷ್. ಮಂಡ್ಯದ ಗಂಡು ಎಂದೇ ಕರೆಸಿಕೊಳ್ಳುತ್ತಿದ್ದ ಅಂಬರೀಷ್ ಮತ್ತು ಸುಮಲತಾ ದಂಪತಿಯ ಏಕೈಕ ಪುತ್ರ. ಇತ್ತೀಚೆಗೆ ಅಭಿಷೇಕ್ ಮದುವೆ ಫಿಕ್ಸ್ ಆಗಿದೆ. ಡಿಸೆಂಬರ್ 11ಕ್ಕೆ ಅರಮನೆ ಮೈದಾನದಲ್ಲಿ ನಿಶ್ಚಿತಾರ್ಥ ಎಂದೆಲ್ಲ ಸುದ್ದಿಯಾಗಿತ್ತು.

ಹುಡುಗಿಯ ಹೆಸರು ಅವೀವಾ. ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮಗಳು. ಮಾಡೆಲ್ ಮತ್ತು ಬ್ಯುಸಿನೆಸ್ ವುಮನ್. ಒಂದು ಮೂಲದ ಪ್ರಕಾರ ಅವಿವಾ ಮತ್ತು ಅಭಿಷೇಕ್ ಅವರದ್ದು 3 ವರ್ಷದ ಲವ್ ಸ್ಟೋರಿ. ಇನ್ನೊಂದು ಮೂಲದ ಪ್ರಕಾರ ಅರೇಂಜ್ಡ್ ಮ್ಯಾರೇಜ್. ಮದುವೆಯನ್ನು ಮುಂದಿನ ವರ್ಷ ಮಾಡಿಕೊಳ್ಳೋ ಯೋಜನೆಯಲ್ಲಿರೋ ಜೋಡಿ ಡಿಸೆಂಬರ್ 8ರಂದು ಅಧಿಕೃತವಾಗಿ ಘೋಷಿಸುವ ಯೋಚನೆಯಲ್ಲಿತ್ತು. ಡಿಸೆಂಬರ್ 8, ಅಂಬಿ-ಸುಮಲತಾ ಮದುವೆ ವಾರ್ಷಿಕೋತ್ಸವದ ದಿನ.ಆ ದಿನವೇ ನಿಶ್ಚಿತಾರ್ಥವನ್ನು ಘೋಷಿಸುವ ಯೋಜನೆಯಲ್ಲಿತ್ತಂತೆ ಬಿದ್ದಪ್ಪ-ಅಂಬಿ ಫ್ಯಾಮಿಲಿ. ಈಗ ಎಲ್ಲವೂ ಬಹಿರಂಗವಾಗಿದೆ. ಈಗಲೂ.. ಕೂಡಾ ಸುಮಲತಾ ಆಗಲೀ, ಅಭಿಷೇಕ್ ಆಗಲೀ.. ಅಥವಾ ಪ್ರಸಾದ್ ಬಿದ್ದಪ್ಪ ಅಧಿಕೃತವಾಗಿ ಘೋಷಿಸಿಲ್ಲ.



