ಕಾಂತಾರದ ಹಾಡು ಕದ್ದಿದ್ದಾ? ಸ್ಪೆಷಲ್ಲುನಲ್ಲಿ ಅಕ್ಟೋಬರ್ 4ರಂದು ಪ್ರಥಮ ಬಾರಿಗೆ ಈ ಸುದ್ದಿ ಹೊರಬಿದ್ದಿತ್ತು. ಆಗಿನ್ನೂ ಕಾಂತಾರದ ಯಶಸ್ಸಿನ ಆರಂಭಿಕ ದಿನಗಳು. ನಂತರ ಅದು ವೈರಲ್ ಆಗಿ ಅಜನೀಶ್ ಲೋಕನಾಥ್ ಸ್ಪಷ್ಟನೆಯನ್ನೂ ಕೊಟ್ಟಿದ್ದರು.
ಅಕ್ಟೋಬರ್ 4ಂದು ಪ್ರಕಟವಾಗಿದ್ದ ವರದಿ.
ಕಾಂತಾರ ಮ್ಯೂಸಿಕ್ ಕದ್ದಿದ್ದಾ? ಬ್ರಾಹ್ಮಣ್ಯವ ವೈಭವೀಕರಣವಾ?https://www.speciallu.com/cinema/did-kantara-steal-the-music-brahminical-glorification/
ಅಜನೀಶ್ ಲೋಕನಾಥ್ ಹಾಡು ಕದ್ದಿದ್ದಲ್ಲ. ಆದರೆ ಹಾಡಿನ ಪ್ರಭಾವ ಈ ವರಾಹ ರೂಪಂ ಹಾಡಿನ ಮೇಲಿದೆ. ಅದರಿಂದ ಸ್ಫೂರ್ತಿಗೊಂಡಿದ್ದೇನೆ. ಆದರೆ ಕದ್ದಿಲ್ಲ ಎಂದು ಹೇಳಿಕೆ ನೀಡಿದ್ದರು.
ಒಂದೇ ರಾಗ.. ಒಂದೇ ಭಾವ. ಆದರೆ ಕಾಂತಾರದ ಮ್ಯೂಸಿಕ್ ಕದ್ದಿಲ್ಲ :
https://www.speciallu.com/cinema/same-tune-same-feeling-but-kantaras-music-is-not-stolen/
ಈ ಹೇಳಿಕೆ ಈಗ ಕಾನೂನಿನ ಹೋರಾಟಕ್ಕೆ ವೇದಿಕೆ ಸೃಷ್ಟಿಸಿದೆ. ತೈಕ್ಕುಡಂ ಬ್ರಿಡ್ಜ್ ತಂಡವು ಕಾಂತಾರ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ ಎಂದು ನಾವು ನಮ್ಮ ಕೇಳುಗಳರಿಗೆ ಹೇಳುತ್ತಿದ್ದೇವೆ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನುನೂ ಕ್ರಮ ಕೈಗೊಳ್ಳುತ್ತೇವೆ. ಹಾಡಿನ ಹಕ್ಕುಗಳ ಕುರಿತಂತೆ ಕಾಂತಾರ ತಂಡ ನಮಗೆ ಯಾವುದೇ ಕ್ರೆಡಿಟ್ ನೀಡಿಲ್ಲ, ಈ ಹಾಡನ್ನು ತಮ್ಮ ಸ್ವಂತ ಸೃಷ್ಟಿ ಎನ್ನುವಂತೆ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಬೇಕು, ಅಷ್ಟೇ ಅಲ್ಲದೆ ಎಲ್ಲ ಸಂಗೀತಕಾರರು ಮ್ಯೂಸಿಕ್ ರೈಟ್ ಉಳಿಸಿಕೊಳ್ಳಲು ಸಹಾಯ ಮಾಡಿ ಎಂದು ಕೇಳಿಕೊಂಡಿದೆ ತೈಕ್ಕುಡಂ ಬ್ರಿಡ್ಜ್ ಟೀಂ.
https://www.youtube.com/watch?v=oYK6JU7Nx38
ಅಂದಹಾಗೆ ಇದು 2017ರಲ್ಲಿ ರಿಲೀಸ್ ಆಗಿದ್ದ ಆಲ್ಬಂ. ಚಿತ್ರದ ಹಾಡಿನಲ್ಲಾಗಲೀ, ಸಿನಿಮಾದಲ್ಲಾಗಲೀ ಮೂಲ ಹಾಡಿಗೆ ಕ್ರಿಡಿಟ್ ನೀಡದೇ ಇರುವುದು ಮ್ಯೂಸಿಕ್ ಆಲ್ಬಂನವರ ಕೋಪಕ್ಕೆ ಕಾರಣ. ಸಂಗೀತ ನಿರ್ದೇಶಕರಾರೂ ಈ ಬಗ್ಗೆ ಧ್ವನಿಯೆತ್ತಿಲ್ಲ. ಅಲ್ಲದೆ ಹಾಡಿನ ಬಗ್ಗೆ ನವರಸಂ ತಂಡದವರೂ ಕೊಂಕು ತೆಗೆದಿಲ್ಲ. ಅವರಿಗೂ ವಾಸ್ತವ ಏನೆಂದು ಗೊತ್ತು. ಹಾಡಿನ ರಾಗಗಳು ಒಂದೇ. ಕದ್ದಿದ್ದಲ್ಲ ಎಂಬ ಸ್ಪಷ್ಟನೆಯೇನೋ ಹೊರಬಿದ್ದಿದೆ. ಈಗ ನವರಸಂ ತಂಡದವರು ಧ್ವನಿ ಎತ್ತಿರುವಿದರಿಂದ ಇದು ಕಾನೂನು ಹೋರಾಟದ ಸ್ವರೂಪ ಪಡೆಯಬಹುದು.



