ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ನಡುವಿನ ಮಾತುಕತೆ ಹೀಗಿತ್ತು.
ರೂಪೇಶ್ ಶೆಟ್ಟಿ: ನನ್ನನ್ನು ಕ್ಷಮಿಸಿ, ನಾನು ಇಲ್ಲ ಅಂದ್ರೆ ಅಂತಾ ಮಾತು ಬರುತ್ತಿರಲಿಲ್ಲ
ಸಾನ್ಯಾ ಅಯ್ಯರ್: ನಿನಗೆಲ್ಲಿ ಬೇಜಾರಾಯ್ತು. ಆ ರೀತಿ ಮಾತನಾಡಬೇಡ..
ರೂಪೇಶ್ ಶೆಟ್ಟಿ: ನನ್ನ ಉದ್ದೇಶದಲ್ಲಿ ಯಾವ ತಪ್ಪೂ ಇರಲಿಲ್ಲ
ಸಾನ್ಯಾ: ಇಲ್ಲಿ ಯಾರೂ ನಿನ್ನ ಉದ್ದೇಶದ ಬಗ್ಗೆ ಮಾತನಾಡಿಲ್ಲ. ನಿಂಗ್ ಆ ತರ ಅನ್ಸಿದೆ. ಅಷ್ಟೆ.
ರೂಪೇಶ್: ನಾನು ಗುರೂಜಿ ಮಲ್ಕೊಂಡಿದ್ವಿ, ನೀನು ಬಂದು ಕೂತೆ
ಇದು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ನಡುವೆ ಬಿಗ್ ಬಾಸ್ ಹೌಸ್ನಲ್ಲಿ ನಡೆದ ಮಾತುಕತೆ. ಅದಕ್ಕೆ ಕಾರಣವಾಗಿದ್ದು ಕಿಚ್ಚ ಕೊಟ್ಟ ವಾರ್ನಿಂಗ್. ಕ್ಯಾಪ್ಟನ್ಸಿ ರೂಮ್ನಲ್ಲಿ ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಆರ್ಯವರ್ದನ್ ಕೂತು ಮಾತನಾಡುತ್ತಿದ್ದಾಗ ಆರ್ಯವರ್ದನ್ ಹಾಸಿಗೆ ಮಲಗಿದ್ದರು. ಪಕ್ಕದಲ್ಲಿ ರೂಪೇಶ್ ಶೆಟ್ಟಿ ಕೂಡಾ ಮಲಗಿದ್ದರು. ರೂಪೇಶ್ ಕಾಲ ಮೇಲೆ ಸಾನ್ಯಾ ಅಯ್ಯರ್ ಒರಗಿಕೊಂಡು ಮಲಗಿದ್ದರು. ಇದರ ಬಗ್ಗೆ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಬಿಗ್ ಬಾಸ್ ಇರೋದು ಇದಕ್ಕಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದಾದ ಮೇಲೆ ನಡೆದ ಮಾತುಕತೆ ಇದು.
ಕ್ಯಾಪ್ಟನ್ ರೂಮ್ಗೆ ಗೌರವ ಇದೆ. ಅದು ಪಿಕ್ನಿಕ್ ಸ್ಪಾಟ್ ಅಲ್ಲ. ಇದು 9ನೇ ಸೀಸನ್. ಇಷ್ಟೂ ಸೀಸನ್ನಲ್ಲಿ ಬಂದವರು ಫ್ರೆಂಡ್ಸ್ ಆಗಿದ್ದಾರೆ. ಹೊರಗಡೆ ಬಂದ ಮೇಲೆ ಗೌರವದೊಂದಿಗೆ ಮದುವೆಯೂ ಆಗಿದ್ದಾರೆ. ಆದರೆ, ನಾವು ಎಲ್ಲಿದ್ದೀವಿ? ಏನು ಮಾಡ್ತಾ ಇದ್ದೀವಿ.. ಅನ್ನೋದು ಗೊತ್ತಿರಬೇಕು. ಅಪ್ಪಿಕೊಳ್ಳೋದು ಪ್ರಾಬ್ಲಮ್ ಅಲ್ಲ. ಬಿಹೇವಿಯರ್ ಇಸ್ ದಿ ಪ್ರಾಬ್ಲಂ. ಇದುವರೆಗೂ ರಾತ್ರಿ ಹೊತ್ತು ಎಲ್ಲರೂ ಮಲಗಿದ್ದಾಗ ನೀವಿಬ್ಬರೂ ಎದ್ದು ತಬ್ಬಿಕೊಳ್ಳುತ್ತಿಲ್ಲ. ಅದು ಇಷ್ಯೂ ಕೂಡಾ ಅಲ್ಲ. ಆದರೆ ಕ್ಯಾಪ್ಟೆನ್ಸಿ ರೂಮ್ನಲ್ಲಿ ನಡೆದಿದ್ದನ್ನು ಒಪ್ಪಿಕೊಳ್ಳೋಕಾಗಲ್ಲ. ಇದರಿಂದ ಬಿಗ್ ಬಾಸ್ಗೆ ಕಂಟೆಂಟ್ ಸಿಗ್ತಾ ಇರೋದರಿಂದ ಎಲ್ಲಾ ಓಕೆ ಈ ಮನೆಯಲ್ಲಿ ಅಂದ್ರೆ.. ಈ ಶೋ ಅದಕ್ಕೆ ಇಲ್ಲ. ಎಂದು ಕಿಚ್ಚ ಸುದೀಪ್ ಅವರು ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿಗೆ ಶನಿವಾರದ ಎಪಿಸೋಡ್ನಲ್ಲಿ ಎಚ್ಚರಿಕೆ ನೀಡಿದ್ದರು.
ಇದೇ ವೇಳೆ ರಾಕೇಶ್ ಅಡಿಗ ಕೂಡಾ ನಾನು ನಿನ್ನ ಜಾಗದಲ್ಲಿ ಇದ್ದಿದ್ದರೆ ನನ್ನ ಉದ್ದೇಶ ಆ ರೀತಿ ಆಗಿರಲಿಲ್ಲ. ಅದು ಕರ್ನಾಟಕಕ್ಕೆ ಗೊತ್ತಿದೆ. ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎನ್ನುತ್ತಿದ್ದೆ. ಉದ್ದೇಶ ತಪ್ಪು ಅನ್ನೋದನ್ನು ತಲೆಯಿಂದ ತೆಗೆದುಹಾಕು ಎಂದರು. ಆರ್ಯವರ್ದನ್ ಮಾತ್ರ ಒಟಿಟಿಯಲ್ಲಿದ್ದ ಹಾಗೆಯೇ ಇರು. ಎಲ್ಲರ ಜೊತೆ ಮಾತನಾಡು. ಚೆನ್ನಾಗಿರು, ತಿದ್ದಿಕೋ ಎಂದಿದ್ದಾರೆ.



