ಆದಿತಿ ಪ್ರಭುದೇವ ಎಲ್ಲೇ ಹೋದರೂ ತಮ್ಮ ಹುಡುಗನ ಬಗ್ಗೆ ಮಾತನಾಡ್ತಾರೆ. ಆ ಹುಡುಗ ಯಶಸ್ವಿ. ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಅವರಿಗೆ ಆದಿತಿ ಇಷ್ಟವಾದರು. ಆದಿತಿಯೂ ಇಷ್ಟಪಟ್ಟರು. ಮನೆಯವರೂ ಒಪ್ಪಿದರು. ಕಳೆದ ವರ್ಷ ಡಿಸೆಂಬರ್ 26ರಂದು ಎಂಗೇಜ್‍ಮೆಂಟ್ ಕೂಡಾ ಆಗಿತ್ತು. ಈಗ ಮದುವೆ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 27ಕ್ಕೆ ಮದುವೆ.
ಗುಂಡ್ಯಾನ ಹೆಂಡ್ತಿ, ನಾಗಕನ್ನಿಕೆ ಸೀರಿಯಲ್ಲುಗಳ ಮೂಲಕ ಗಮನ ಸೆಳೆದ ಆದಿತಿ, ಧೈರ್ಯಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದವರು. ಆದಿತಿ ಪ್ರಭುದೇವ ಎದುರು ನಟಿಸಿ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದವರು. ಮಾತಿನಲ್ಲಿ ಬೋಲ್ಡ್ ಆಗಿರುವ ಆದಿತಿ, ನಟನೆಯಲ್ಲಿ ಕ್ಲಾಸ್. ಸುಂದರಿ. ಶ್ಯಾನೆ ಟಾಪ್ ಹುಡುಗಿ. ಸಿಂಗ ಚಿತ್ರದ ಶ್ಯಾನೆ ಟಾಪಾಗವ್ಳೆ.. ಹಾಡಿನೊಂದಿಗೆ ಕನ್ನಡಿಗರು ಗುರುತಿಸುತ್ತಾರೆ. ಸಿಂಗ, ಬ್ರಹ್ಮಚಾರಿ, ರಂಗನಾಯಕಿ, ಒಂಬತ್ತನೇ ದಿಕ್ಕು, ಓಲ್ಡ್ ಮಾಂಕ್.. ಹೀಗೆ ನಟಿಸಿದ ಚಿತ್ರಗಳು ಒಂದೆರಡಲ್ಲ. ಈಗಲೂ ಕೈತುಂಬಾ ಚಿತ್ರಗಳಿವೆ. ಅಂದೊಂದಿತ್ತು ಕಾಲ, ಮಾಫಿಯಾ, 5ಡಿ ಹಲವು ಚಿತ್ರಗಳು ಚಿತ್ರೀಕರಣದ ವಿವಿಧ ಹಂತದಲ್ಲಿವೆ. ಒನ್ಸ್ ಅಪಾನ್ ಎ ಜಮಾಲಿಗುಡ್ಡ ಚಿತ್ರ ರೆಡಿಯಾಗಿದೆ. ಈ ನಡುವೆಯೇ ಇದೇ ತಿಂಗಳು ಕೊನೆಗೆ ಮದುವೆ ಫಿಕ್ಸ್ ಆಗಿದೆ.
ನಮ್ ಹುಡ್ಗ ನನ್ನ ಸಿನಿಮಾ ಮಾಡೋಕೆ ಓಕೆ ಎಂದಿದ್ದಾನೆ ಎಂದಿರೋ ಆದಿತಿ ಮದುವೆಯ ನಂತರವೂ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.



