ಭೌತಿಕವಾಗಿ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಇವತ್ತಿಗೂ ಜೀವಂತವಾಗಿರುವ ಡಾ.ಪುನೀತ್ ರಾಜಕುಮಾರ್ ಅವರ ಪ್ರತಿಮೆ ಇಂದು ಬಳ್ಳಾರಿಯಲ್ಲಿ ಅನಾವರಣಗೊಳ್ಳಲಿದೆ. ಬಳ್ಳಾರಿ ಉತ್ಸವದ ಅಂಗವಾಗಿ ಸಿದ್ಧವಾಗಿರುವ ಬೃಹತ್ ಪ್ರತಿಮೆ ಇದು. ಪುನೀತ್ ನಮ್ಮನ್ನು ಬಿಟ್ಟು ಹೋಗಿ ವರ್ಷ ಕಳೆದಿದ್ದರೂ ಪ್ರೀತಿ ಕಮ್ಮಿಯಾಗಿಲ್ಲ. ಬದಲಿಗೆ ಇನ್ನೂ ಇನ್ನೂ ಹೆಚ್ಚುತ್ತಿದೆ. ಈ ಪ್ರೀತಿ ಅಭಿಮಾನಕ್ಕೆ ಅಭಿಮಾನಿಗಳು ನೀಡುತ್ತಿರುವ ಕಾಣಿಕೆ ಅಪ್ಪು ಪ್ರತಿಮೆ.




ಈ ಪ್ರತಿಮೆಯನ್ನು ಶಿವಮೊಗ್ಗದಿಂದ ಬಳ್ಳಾರಿಗೆ ತರುವುದಕ್ಕೆ 40 ಅಡಿ ಉದ್ದದ 18 ಚಕ್ರದ ಉದ್ದನೆಯ ಟ್ರಕ್ ಬಳಸಲಾಗಿದೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರಿಂದ ಈ ಪ್ರತಿಮೆ ಉದ್ಘಾಟನೆಯಾಗಲಿದೆ. ಜೊತೆ ಜೊತೆಯಲ್ಲೇ ಬಳ್ಳಾರಿ ಉತ್ಸವವೂ ರಂಗೇರಲಿದೆ.



