ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮಧ್ಯೆ ಎದ್ದಷ್ಟು ಗಾಸಿಪ್ಪುಗಳು, ಸ್ಟೋರಿಗಳು ಇತ್ತೀಚಿನ ವರ್ಷಗಳಲ್ಲಿ ಬೇರಾವ ಸ್ಟಾರ್ ನಟ-ನಟಿಯ ಮಧ್ಯೆಯೂ ಬಂದಿರಲಿಲ್ಲ ಎನ್ನುವುದು ಸತ್ಯ. ಇಬ್ಬರೂ ಬೋಲ್ಡ್ & ಬ್ಯೂಟಿಫುಲ್. ಜೊತೆಗೆ ರಶ್ಮಿಕಾ ನಟಿಸಿರುವ ಕಿಸ್ಸಿಂಗ್ ಸೀನ್‍ಗಳೆಲ್ಲ ವಿಜಯ್ ದೇವರಕೊಂಡ ಚಿತ್ರದಲ್ಲಿ ಮಾತ್ರವೇ. ಗೀತಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಮಾತ್ರ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಜೊತೆಗೆ ಆಗಾಗ್ಗೆ ಹೊರಗೆ ಜೊತೆ ಜೊತೆಯಾಗಿ ಬಿಂದಾಸ್ ಆಗಿ ಸುತ್ತಾಡಿದ್ದಾರೆ. ಇಷ್ಟಿದ್ದ ಮೇಲೆ ಸಿನಿಮಾ ಮಂದಿಗೇನು ಬೇಕು.. ಆದರೆ ರಶ್ಮಿಕಾ ಮಂದಣ್ಣ ಈ ಬಗ್ಗೆ ಇದೇ ಮೊದಲ ಬಾರಿಗೆ ಗೊಂದಲಕ್ಕೆ ಅವಕಾಶವಿಲ್ಲದಂತೆ ಮಾತನಾಡಿದ್ದಾರೆ.




ನಿರ್ಮಾಪಕ ಕರಣ್ ಜೋಹರ್ ಕೂಡಾ ಈ ಬಗ್ಗೆ ಮಾತನಾಡಿ ನನಗೆ ಗೊತ್ತಿರೋ ಹಾಗೆ ವಿಜಯ್ ದೇವರಕೊಂಡ ಸಿಂಗಲ್. ಆತ ನಾನು ಸಿಂಗಲ್ ಅನ್ನೋದನ್ನ ಪದೇ ಪದೇ ಒತ್ತಿ ಹೇಳಬೇಕು ಎಂದಿದ್ದಾರೆ.



