ವರಾಹಮಿಹಿರ. ಕ್ರಿಸ್ತಪೂರ್ವ 5ನೇ ಶತಮಾನದಲ್ಲಿದ್ದ ಖಗೋಳಶಾಸ್ತ್ರಜ್ಞ. ವರಾಹಮಿಹಿರ ವಿಕ್ರಮಾದಿತ್ಯ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂಬ ಪ್ರತೀತಿ ಇದೆ. ಭೂಮಿ ಗೋಳಾಕಾರವಾಗಿದೆ ಎಂದು ಸಾಧಿಸಿ ತೋರಿಸಿದವರು. . ಯಾವುದೇ ಉಪಕರಣಗಳಿಲ್ಲದ ಆ ಕಾಲದಲ್ಲಿ ಸೂರ್ಯ, ಚಂದ್ರ, ಭೂಮಿ, ಗ್ರಹಗಳ ಗತಿಯನ್ನು ಕರಾರುವಾಕ್ಕಾಗಿ ಹೇಳಿದ ವಿಜ್ಞಾನಿ. ಸೂರ್ಯ ಗ್ರಹಣ ಮತ್ತು ಗ್ರಹಗಳ ಸ್ಥಾನಗಳನ್ನು ಕುರಿತು ವಿವರಿಸಿದ. ಗಣಿತದ ತ್ರಿಕೋಣಮಿತಿ ನಿಯಮ ಹಾಗು ‘ಜ್ಯಾ’ ಮಾನದ ಸರಣಿಯನ್ನೂ ಆರಂಭಿಸಿದ. ಇದಲ್ಲದೇ ಈತ ಷಟ್ ಪಂಚಾಂಗ, ಹೋರಾ-ಪಂಚ-ಹೋತ್ರೀಯ ಯೊಗಯಾತ್ರಾ, ಟಿಕನಿಯಾತ್ರಾ, ಬೃಹಜ್ಜಾತಕ, ವಾಹ ಪಟಲ ಮೊದಲಾದ ಕೃತಿಗಳನ್ನು ರಚಿಸಿದ ಖ್ಯಾತಿಯೂ ಇವರಿಗೆ ಇದೆ. ಇವರ ಒಂದು ವಿಶೇಷ ಕೃತಿಯೇ ಬೃಹತ್ ಸಂಹಿತೆ.
ಈ ಬೃಹತ್ ಸಂಹಿತೆಯಲ್ಲಿ ಜ್ಯೊತಿಷ್ಯ, ಗ್ರಹಗಳ ಚಲನೆ, ಗ್ರಹಣ, ಮೋಡ, ಮಳೆ, ಶಿಲ್ಪಕಲೆ, ಬೆಳೆಗಳ ಬೆಳವಣಿಗೆ,ಸುಗಂಧ ದ್ರವ್ಯಗಳ ತಯಾರಿಕೆ, ಮದುವೆ, ಮುತ್ತು, ರತ್ನ ಹಾಗೂ ಸಂಪ್ರದಾಯದ ವಿಷಯಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಬೃಹತ್ ಜಾತಕ, ಲಘುಜತಕ, ಸಮಾಸ ಜಟಕ, ಬೃಹತ್ ಯೋಗಯಾತ್ರ, ಯೋಗಯಾತ್ರ, ಟಿಕ್ಕಾಣಿ ಯಾತ್ರ, ಬೃಹತ್ ವಿವಾಹ ಪತಲ್, ಲಘು ವಿವಾಹ ಪತಲ್, ಲಗ್ನ ವರಾಹಿ, ಕುತೂಹಲ ಮಂಜರಿ, ದೈವಜ್ಞ ವಲ್ಲಭ ಮೊದಲಾದ ಕೃತಿಗಳ ರಚನೆಕಾರ. ಭೂಕಂಪ, ಜಲಮೂಲ ಹುಡುಕುವುದು ಹೇಗೆ ಎನ್ನುವುದಕ್ಕೂ ವೈಜ್ಞಾನಿಕವಾಗಿ ವಿವರ ನೀಡಿರುವ ವಿಜ್ಞಾನಿ. ಇಂತಹ ವರಾಹ ಮಿಹಿರ ಕ್ರಿ.ಪೂ.5ನೇ ಶತಮಾನದಲ್ಲೇ ಗ್ರಹಣ ಬಗ್ಗೆಯೂ ವಿವರಿಸಿದ್ದ.
ಈತನ ಬೃಹತ್ ಸಂಹಿತೆಯಲ್ಲಿ ಗ್ರಹಣದ ಬಗ್ಗೆಯೂ ವಿವರಣೆ ನೀಡಲಾಗಿದೆ. ಕಾರ್ತಿಕ ಮಾಸದ ಗ್ರಹಣ ಅದು ಯಾವುದೇ ಆಗಿರಲಿ, ಸೂರ್ಯ ಅಥವಾ ಚಂದ್ರ ಗ್ರಹಣವೇ ಆಗಿರಲಿ. ಗ್ರಹಣವು ಸುಭಿಕ್ಷಕಾರಕ. ಕೋಸಲ ರಾಜ್ಯ (ಅಯೋಧ್ಯೆ) ಶೂರಸೇನ ಪ್ರದೇಶ (ಮಥುರಾ) ಕಾಶಿ, ಕಳಿಂಗ (ಒಡಿಶಾ) ಪ್ರದೇಶದ ರಾಜ್ಯಗಳಿಗೆ ಸಂಕಷ್ಟ ತಲೆದೋರುತ್ತದೆ. ಪೂರ್ವ ಪ್ರಾಂತ್ಯದ ರಾಜ್ಯಗಳಿಗೂ ಸಂಕಷ್ಟ. ಇಡೀ ದೇಶದಲ್ಲಿ ಗಲಭೆ ಮಯ ವಾತಾವರಣವಿರುತ್ತದೆ. ರಾಜರ ಮೇಲೆ ದಾಳಿಗಳು ನಡೆಯುತ್ತವೆ. ಅಗ್ನಿ (ವಿದ್ಯುತ್) ಅನಾಹುತಗಳು ಹೆಚ್ಚು. ಇಂತಹ ವಿವರಣೆಗಳಿವೆ.

ಇಲ್ಲಿ ಒಂದು ವಿಷಯ ಗಮನಿಸಬೇಕು. ಆಗ ಕ್ರಿ.ಪೂ.5ನೇ ಶತಮಾನದ ಭೌಗೋಳಿಕ ವ್ಯಾಪ್ತಿ ತೆಗೆದುಕೊಂಡರೆ, ಭರತಖಂಡದ ವಿವರಣೆ ತೆಗೆದುಕೊಂಡರೆ ಎಲ್ಲವೂ ಹಾಗಯೇ ಆಗುತ್ತಿದೆ. ಪಾಕ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ದಾಳಿ. ಎಲ್ಲೆಲ್ಲೂ ಪ್ರವಾಹ. ಜನಗಳು ಗಲಭೆಯೇಳುತ್ತಿರುವುದನ್ನು ನೋಡುತ್ತಿದ್ದೇವೆ.
ಶುಭವನ್ನೂ ಹೇಳಲಾಗಿದೆ. ಸೂರ್ಯಗ್ರಹಣದ ನಂತರ 15 ದಿನಗಳ ಅಂತರದಲ್ಲಿ ಚಂದ್ರಗ್ರಹಣವಾದರೆ ಧಾರ್ಮಿಕ ವಾತಾವರಣ ವೃದ್ಧಿಯಾಗುವುದು ಹಾಗೂ ಜನರು ಸಂತೋಷದಿಂದಿರುತ್ತಾರೆ ಎಂದು ಬೃಹತ್ ಸಂಹಿತೆಗೆಯ ಪಂಚಮೋಧ್ಯಾಯದಲ್ಲಿ ಹೇಳಿದೆ.
ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಿದಾಗ ಪಾಂಚಾಲ ದೇಶ(ಪಂಜಾಬ್), ಕಳಿಂಗ(ಒಡಿಶಾ) ಶೂರಸೇನ(ಮಥುರಾ), ಕಾಂಬೋಜ, ಕಿರಾತ ದೇಶಗಳಿಗೆ ಸಂಕಷ್ಟ ತಲೆದೋರುವ ಸಂಭವವಿದೆ. ಶಸ್ತ್ರಾಸ್ತ್ರಗಳಿಂದ ಜೀವನ ಮಾಡುವ ಪೊಲೀಸರು, ಸೈನಿಕರು, ಅಗ್ನಿಯೊಂದಿಗೆ ಕೆಲಸ ಮಾಡುವ ಕಮ್ಮಾರ, ಅಕ್ಕಸಾಲಿಗ, ಅಡುಗೆ ಭಟ್ಟರು.. ಮೊದಲಾದವರು ತೊಂದರೆಗೆ ಗುರಿಯಾಗುತ್ತಾರೆ ಎನ್ನುತ್ತದೆ ಶಾಸ್ತ್ರ.
ಗ್ರಹಣದ ದೋಷಗಳು ನಿವಾರಣೆಯಾಗಬೇಕೆಂದರೆ ಗ್ರಹಣದ ಮುಗಿದ ಒಂದು ವಾರದೊಳಗೆ ಸಾಮಾನ್ಯ ಮಳೆಯಾಗಬೇಕು. ಸಾಮಾನ್ಯ ಮಳೆಯಾದರೆ ಎಲ್ಲ ಅಶುಭ ಫಲಗಳೂ ನಾಶವಾಗುತ್ತವೆ ಎಂದು ವರಾಹಿಮಿಹಿರನ ಗ್ರಂಥದಲ್ಲಿ ವಿವರವಾಗಿ ಬರೆಯಲಾಗಿದೆ.



