ಪ್ರತಿಯೊಬ್ಬರಿಗೂ ಒಂದು ಜನ್ಮರಾಶಿ ಇರುತ್ತದೆ. ಆ ರಾಶಿಗೆ ತಕ್ಕಂತೆಯೇ ವ್ಯಕ್ತಿತ್ವವೂ ಇರುತ್ತದೆ. ಪ್ರೀತಿ, ಪ್ರೇಮ, ಧನ, ಮನೆ, ಐಶ್ವರ್ಯ, ಸುಖ ದುಃಖಗಳೂ ರಾಶಿ ಪ್ರಕಾರವಾಗಿಯೇ ಬಂದಿರುತ್ತವೆ. ಹಾಗೆಯೇ ರಾಶಿಗೆ ತಕ್ಕಂತೆ ಗಂಡಾಂತರಗಳೂ ಇರುತ್ತವೆ. ಆ ರಾಶಿಗೆ ಹೊಂದುವ ಗುಣ ಕೂಡ ಇರುತ್ತದೆ. ಬೆಂಕಿ, ಗಾಳಿ, ನೀರು, ಭೂಮಿ, ಆಕಾಶ- ಈ ಪಂಚಭೂತಗಳಲ್ಲಿ ಒಂದು ರಾಶಿ ಪ್ರಕಾರ ನಿಮ್ಮದಾಗಿರುತ್ತೆ. ಹೀಗಾಗಿ ನಮ್ಮ ನಿಮ್ಮ ಬದುಕು- ಸಾವು ಕೂಡ ಈ ಐದು ಭೂತಗಳಿಗೆ ಸಂಬಂಧಿಸಿದ ಹಾಗೆಯೇ ಇರುವುದು ಸ್ವಾಭಾವಿಕ.
ಹುಟ್ಟಿದವರಿಗೆ ಸಾವು ಹಣೆಯಲ್ಲಿ ಬರೆದಿರುತ್ತದೆ. ಹುಟ್ಟು ಉಚಿತ, ಸಾವು ಖಚಿತ. ಚಿರಂಜೀವಿಯಾಗಿರಲು ಯಾರಿಗೂ ಸಾಧ್ಯವಿಲ್ಲ. ಯಾರೂ ಅಮೃತ ಕುಡಿದಿರುವ ದೇವತೆಗಳೂ ಅಲ್ಲ. ಸಾವು ಕೂಡಾ ಜನ್ಮರಾಶಿಗೆ ತಕ್ಕಂತೆಯೇ ಇರುತ್ತದೆ. ಅದು ನೂರಕ್ಕೆ ನೂರು ಸತ್ಯವಲ್ಲ. ಆದರೆ ಬಹುತೇಕ ರಾಶಿ ಪ್ರಕಾರವೇ ನಿರ್ಧಾರವಾಗುತ್ತದೆ. ಜನ್ಮವನ್ನು ಹೇಗೆ ನಿರ್ವಹಿಸಲು ಸಾಧ್ಯವಿಲ್ಲವೋ.. ಹಾಗೆಯೇ ಹೆಸರು ಬದಲಾವಣೆಯಿಂದ ರಾಶಿ ಬದಲಿಸಲೂ ಸಾಧ್ಯವಿಲ್ಲ. ರಾಶಿ ಫಲವನ್ನೂ ಬದಲಿಸಲೂ ಸಾಧ್ಯವಿಲ್ಲ. ಜೀವನಶೈಲಿ ಆರೋಗ್ಯಕರವಾಗಿದ್ದರೆ, ಶನಿಯಂಥ ಗ್ರಹಗಳು ಸೂಕ್ತ ಸ್ಥಾನದಲ್ಲಿದ್ದು ನಿಮ್ಮನ್ನು ರಕ್ಷಿಸಿದರೆ, ಅಪಮೃತ್ಯಗಳು ಕಾಡಲಾರವು ಎಂಬುದನ್ನೂ ನೆನಪಿನಲ್ಲಿಡಬೇಕು.
ಮೇಷ ರಾಶಿ
ಬೆಂಕಿ ಯಾವುದನ್ನೂ ಬಿಡುವುದಿಲ್ಲ. ಸುಡುವುದೇ ಅದರ ಗುಣ. ಪಂಚಭೂತಗಳಲ್ಲಿ ಬೆಂಕಿಯೇ ಇವರ ಅಧಿಪತಿ. ವ್ಯಕ್ತಿತ್ವವೂ ಬೆಂಕಿ. ಆದರೆ ಮೇಷ ರಾಶಿಯವರು ಬೆಂಕಿಯ ವಿಷಯದಲ್ಲಿ ಹೆಚ್ಚು ಹೆಚ್ಚು ಎಚ್ಚರದಿಂದಿರಬೇಕು. ಬಿಸಿಯಾದ ವಸ್ತುಗಳನ್ನು ಹಿಡಿಯುವಾಗ ಎಚ್ಚರ ವಹಿಸಬೇಕು. ಸಣ್ಣ ಕಿಡಿಯೂ ದೊಡ್ಡ ಬೆಂಕಿಯಾಗಬಹುದು. ಉರಿಯುವ ವಸ್ತುಗಳ ಬಳಿ, ಪೆಟ್ರೋಲ್- ಡೀಸೆಲ್ ಕೈಯಲ್ಲಿರುವಾಗ, ಹೆಚ್ಚು ಎಚ್ಚರ ವಹಿಸಬೇಕು.
ವೃಷಭ ರಾಶಿ
ಪಂಚಭೂತಗಳಲ್ಲಿ ಇವರ ಗುಣ ಭೂಮಿಗೆ ಸೇರಿದ್ದು. ಇವರು ಹೃದಯಕ್ಕೆ ಸಂಬಂಧಿಸಿದಂತೆ ಸದಾ ಎಚ್ಚರದಿಂದಿರಬೇಕು. ಹೃದಯಾಘಾತದ ಸೂಚನೆಗಳು ಕಾಣಿಸಿದರೆ ವೈದ್ಯಕೀಯ ಸಲಹೆ ಪಡೆಯಲು ಹಿಂಜರಿಯಬಾರದು. ಒಂದು ವಯಸ್ಸಿನ ನಂತರ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗರೂಕರಾಗಿರಬೇಕು.
ಮಿಥುನ ರಾಶಿ
ಪಂಚಭೂತಗಳಲ್ಲಿ ಇವರು ಗಾಳಿಗೆ ಸೇರಿದವರು. ಕರುಳು, ಲಿವರ್ಗೆ ಸಂಬಂಧಿಸಿದ ಕಾಯಿಲೆಗಳು ಇವರನ್ನು ಕಾಡುತ್ತವೆ. ಕೆಲವೊಮ್ಮೆ ಅದು ಮಾರಣಾಂತಿಕವೂ ಆಗಬಹುದು. ಲೈಫ್ಸ್ಟೈಲ್ಆರೋಗ್ಯಕರವಾಗಿ ಇದ್ದರೆ ಲಿವರ್ಗೆ ಏನೂ ಸಮಸ್ಯೆ ಆಗದು. ಇವರು ಔಷಧಗಳ ವಿಷಯದಲ್ಲೂ ಎಚ್ಚರಿಕೆಯಿಂದ ಇರಬೇಕು. ಓವರ್ ಡೋಸ್ ಬೇಡ.
ಕಟಕ ರಾಶಿ
ಕಟಕ ರಾಶಿಯವರು ಪಂಚಭೂತಗಳಲ್ಲಿ ನೀರಿಗೆ ಸೇರಿರುತ್ತಾರೆ. ನದಿ, ಸುಳಿ, ಹೊಳೆ, ಹಳ್ಳ, ಜಲಾಶಯ, ಸಮುದ್ರ.. ಹೀಗೆ ಯಾವುದೇ ಜಲಮೂಲಗಳ ಬಳಿ ಎಚ್ಚರಿಕೆ ಇರಬೇಕು. ಈಜು ಬರುತ್ತಿದ್ದರೂ ಅಪಾಯಕ್ಕೆ ಆಹ್ವಾನ ಬೇಡ.
ಮೂತ್ರಕೋಶ ಸಂಬಂಧಿತ ಕಾಯಿಲೆ ಇವರನ್ನು ಹೆಚ್ಚು ಕಾಡುತ್ತವೆ. ಕಿಡ್ನಿ ಸಮಸ್ಯೆಗೂ ನೀರೇ ಕಾರಣ ಎಂಬುದನ್ನುಮರೆಯಬೇಡಿ.
ಸಿಂಹ ರಾಶಿ
ಇವರ ಗುಣವೂ ಬೆಂಕಿ. ಮಾರಕ ರೋಗವೊಂದು ನಿಮ್ಮನ್ನು ಕಾಡಬಹುದು. ವಂಶವಾಹಿಯಾಗಿ ಬಂದ ಕಾಯಿಲೆಗಳನ್ನು ಕಡೆಗಣಿಸಬೇಡಿ. ಅರೋಗ್ಯವಂತ ಜೀವನ ಶೈಲಿ ರೂಡಿಸಿಕೊಳ್ಳಿ.
ಕನ್ಯಾ ರಾಶಿ
ಇವರ ಗುಣ ಭೂಮಿ. ಭೂಕುಸಿತ, ಗೋಡೆ ಕುಸಿತಗಳ ಬಗ್ಗೆ ಎಚ್ಚರವಾಗಿರಬೇಕು. ಶಿಥಿಲವಾದ ಸೇತುವೆ, ಸಮುದ್ರದ ಅಂಚು, ಬಾವಿಯ ಅಂಚುಗಳಲ್ಲಿ ಎಚ್ಚರವಾಗಿರಿ. ಬೇಸ್ಮೆಂಟ್ಗಳಲ್ಲಿ, ಸುರಂಗಗಳಲ್ಲಿ ಉಸಿರುಗಟ್ಟಿದ ಅನುಭವ ನಿಮಗೆ ಆಗಬಹುದು. ಭೂಮಿಗಾಗಿ ಸಾಲು ಮಾಡುವುದೂ ನಿಮಗೆ ದುಬಾರಿ.
ತುಲಾ ರಾಶಿ
ಇವರ ಗುಣ ಗಾಳಿ. ಹರಿತವಾದ ವಸ್ತುಗಳಿಗೆ ನಿಮಗೆ ಮರಣಗಂಡ ಉಂಟಾಗಬಹುದು. ಚಾಕು ಚೂರಿ ಇತ್ಯಾದಿಗಳ ಬಗ್ಗೆ ಹುಷಾರಾಗಿರಿ. ಕೆಲವೊಮ್ಮೆ ನೀವು ಆತ್ಮರಕ್ಷಣೆಗೆಂದು ಇಟ್ಟುಕೊಂಡ ಆಯುಧವೇ ನಿಮಗೆ ಮಾರಕವಾಗಬಹುದು. ಆಯುಧಗಳಿಗಿಂತಲೂ ಆತ್ಮೀಯ ಸಂಗಾತಿಗಳೇ ನಮ್ಮನ್ನು ರಕ್ಷಿಸುವವರು ಎಂಬುದು ಗೊತ್ತಿರಲಿ.
ವೃಶ್ಚಿಕ ರಾಶಿ
ಇವರ ಗುಣ ನೀರು. ವಿಷಕಾರಿ ಆಹಾರ ಪದಾರ್ಥಗಳು ಮರಣಗಂಡ ಉಂಟುಮಾಡಬಹುದು. ಗ್ಯಾಸ್ಟರೈಟಿಸ್ ಸಮಸ್ಯೆಯನ್ನು ಹೆಚ್ಚು ಕಾಲ ಉಳಿಯಲು ಬಿಡಬಾರದು. ಕೆಲವು ಸರಳ ಆಹಾರಗಳೇ ವಿಷವಾಗಬಹುದು. ಬೀದಿ ತಿಂಡಿಗಳನ್ನು ಎಚ್ಚರದಿಂದ ಪರಿಶೀಲಿಸಬೇಕು. ಸ್ವಚ್ಛತೆ ಮುಖ್ಯ.
ಧನು ರಾಶಿ
ಮೇಷ, ಸಿಂಹದಂತೆಯೇ ಇವರ ಗುಣವೂ ಬೆಂಕಿ. ಇವರಿಗೆ ಮನಸ್ಸೇ ಶತ್ರು. ಮನಸ್ಸು ಜರ್ಝರಿತಗೊಳಿಸಿಕೊಳ್ಳುವುದೇ ಹಾನಿಕರ. ಆತ್ಮಹತ್ಯೆಯ ಯೋಚನೆಗಳು ಸುಳಿಯಬಹುದು. ಖಿನ್ನತೆ ಉಂಟಾಗಬಹುದು. ಇಂಥ ಸಂದರ್ಭದಲ್ಲಿ ಶಾಂತಿ, ತಾಳ್ಮೆ ಕಾಪಾಡಿಕೊಳ್ಳಿ. ಆತ್ಮೀಯ ಕುಟುಂಬ ಹಾಗೂ ಒಳ್ಳೆಯ ಸಂಬಂಧಗಳನ್ನು ಹೊಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ಮಕರ ರಾಶಿ
ಗುಣ ಭೂಮಿ. ರಾಶಿಯ ಪ್ರಕಾರ ಶತ್ರುಗಳಿಂದ ಮರಣಗಂಡ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಸಿಂಪಲ್ಪರಿಹಾರ ಎಂದರೆ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ. ಸಿಟ್ಟು, ದುಡುಕು, ಮುಂಗೋಪ, ಬಾಯಿ ಚಪಲ, ಚಾಡಿಯಂಥ ಗುಣಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡರೆ ಒಳಿತು, ಹಿತಶತ್ರುಗಳೂ ಗಮನದಲ್ಲಿರಲಿ.
ಕುಂಭ ರಾಶಿ
ಗುಣ ಗಾಳಿ. ಆಹಾರದಿಂದಲೇ ನಿಮಗೆ ತೊಂದರೆ. ಯಾವ ಆಹಾರ ಎಂದು ಚಿಂತಿಸಿ ಫಲವಿಲ್ಲ. ಅದು ನಿಮ್ಮ ಪ್ರೀತಿಯ ಆಹಾರವೇ ಆಗಿರಬಹುದು, ಅನಿಷ್ಟದ ಆಹಾರ ಕೂಡ ಇರಬಹುದು. ಕೆಲವೊಮ್ಮೆ ಸೇವಿಸುವ ಎಲ್ಲ ಆಹಾರವೂ ವ್ಯರ್ಥವೇ. ಆದರೆ ಹೊಟ್ಟೆಯ ಆರೋಗ್ಯದ ಕಡೆ ಹೆಚ್ಚು ಗಮನ ಇರಲಿ.
ಮೀನ ರಾಶಿ
ಗುಣ ನೀರು. ಹಾವುಗಳ ಬಗ್ಗೆ ತುಂಬಾ ಎಚ್ಚರ ವಹಿಸಿ. ವಿಷಕಾರಿಯಾಗಿರಲಿ ಇಲ್ಲದಿರಲಿ, ಅವುಗಳ ಹತ್ತಿರಕ್ಕೂ ಹೋಗಬೇಡಿ. ಕತ್ತಲಿನಲ್ಲಿ ಓಡಾಡುವಾಗ, ಹುಲ್ಲುಗಾವಲಿನಲ್ಲಿ, ಹೊಲಗದ್ದೆಗಳಲ್ಲಿ ಹುಷಾರು. ಹಾವು ಕಚ್ಚಿದರೆ ಏನು ಮಾಡುವುದು ಎಂಬ ಎಮರ್ಜೆನ್ಸಿ ಪ್ಲಾನ್ ಸದಾ ಬಳಿ ಇರಲಿ.



