ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಭಾನುವಾರ ಭೂಮಿಗೆ ಬಂದವರ ಕಥೆ.
ಸೌರಮಂಡಲದ ಕೇಂದ್ರ ಬಿಂದು ಸೂರ್ಯ. ಹೀಗಾಗಿ ಭಾನುವಾರ ಹುಟ್ಟಿದವರೂ ಸೂರ್ಯನಂತೆಯೇ ಹೊಳೆಯೋಕೆ ಇಷ್ಟಪಡ್ತಾರೆ. ಸುತ್ತ ಸಾವಿರ ಜನರಿದ್ದರೂ ಇವರು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರ್ತಾರೆ. ಇವರು ಫುಲ್ ಕ್ರಿಯೇಟಿವ್. ಫಸ್ಟ್ ಮಾತ್ರ ಬೆಸ್ಟ್ ಅನ್ನೋದು ಇವರ ಪಾಲಿಸಿ. ಧೈರ್ಯವಂತರು ಅನ್ನೋದ್ರಲ್ಲಿ ಎರಡನೇ ಮಾತಿಲ್ಲ. ಸ್ವಾರ್ಥಿಗಳೂ ಹೌದು. ಉದಾತ್ತರೂ ಹೌದು. ಗೌರವಾನ್ವಿತರೂ ಹೌದು.
ಆತ್ಮವಿಶ್ವಾಸ ಇವರ ಆಸ್ತಿ ಮತ್ತು ಶಕ್ತಿ.
ಸೂರ್ಯನ ವಾರವಾದ ಭಾನುವಾರ ಜನಿಸುವುದರಿಂದ ಯಾವಾಗಲೂ ಆಕರ್ಷಣೆಯ ಕೇಂದ್ರವಾಗಿರಲು ಬಯಸುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಹಾಗೂ ಸಮಾಜವನ್ನು ಆಳುತ್ತಾರೆ. ಗ್ರಹಗಳು ಸೂರ್ಯನ ಸುತ್ತ ಸುತ್ತುವಂತೆ ಇವರೂ ಕೂಡಾ ಆತ್ಮೀಯರು, ಮಕ್ಕಳು ಹಾಗೂ ಸಾಕುಪ್ರಾಣಿಗಳಿಂದ ಸುತ್ತುವರೆದಿರುತ್ತಾರೆ.
ಭಾನುವಾರದವರು ಒಂದು ರೀತಿಯಲ್ಲಿ ಉತ್ಸಾಹದ ಬುಗ್ಗೆ. ಮನಸ್ಸು ನಿಷ್ಕಳಂಕ. ಶಾಂತ. ಕಳಂಕ ರಹಿತ. ಅಷ್ಟೇ ಚಂಚಲ. ನಿಮಗೆ ಇಂದು ಬೇಕಾಗಿದ್ದದ್ದು ನಾಳೆ ಬೇಡ ಎನ್ನಿಸಿದರೆ ಅಚ್ಚರಿಯಿಲ್ಲ. ಹೆಂಡತಿ ಮತ್ತು ಮಕ್ಕಳನ್ನು ತಕ್ಕಡಿಗೆ ಹಾಕಿ ತೂಗಿದರೆ ಇವರು ಮಕ್ಕಳನ್ನೇ ಹೆಚ್ಚು ಪ್ರೀತಿಸುವವರು.
ಆರೋಗ್ಯಕ್ಕೆ ನೋ ಪ್ರಾಬ್ಲಂ. ಸೋಮಾರಿತನ ಎಂದರೆ ಅಲರ್ಜಿ. ಸೋಮಾರಿಗಳನ್ನು ಕಂಡರಂತೂ ಇನ್ನೂ ಇನ್ನೂ ಅಲರ್ಜಿ. ಮಾತಿಗಿಂತ ಹೆಚ್ಚಾಗಿ ಮೌನವಾಗಿದ್ದುಕೊಂಡೇ ಸವಾಲು ಗೆಲ್ಲುವ ಛಾತಿಯುಳ್ಳವರು.
ವನ್ನು ಹೊಂದಿರುತ್ತೀರಿ. ನೀವು ಸೋಮಾರಿಗಳಂತೆ ಕೈ ಕಟ್ಟಿ ಕೂರುವವರಲ್ಲ. ಹಿಡಿದ ಕೆಲವನ್ನು ಮುಗಿಸಿಯೇ ತೀರುತ್ತೇನೆಂಬ ಹಂಬಲ ನಿಮ್ಮಲ್ಲಿರುತ್ತದೆ. ಯಾವ ಕೆಲಸವೇ ಆಗಲಿ, ಕೆಟ್ಟದ್ದಾಗಲಿ ಅಥವಾ ಒಳ್ಳೆಯದೇ ಆಗಲಿ ಒಮ್ಮೆ ನಿಮ್ಮ ಮನಸ್ಸಿನಲ್ಲಿ ಅದು ಬಂತೆಂದರೆ ನೀವು ಅದನ್ನು ಮುಗಿಸದೆ ಬಿಡುವವರಲ್ಲ. ಬುದ್ಧಿವಂತಿಕೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ನೀವು ನಿಸ್ಸೀಮರು. ಇಷ್ಟೆಲ್ಲ ಇದ್ದರೂ ಭಾನುವಾರ ಹುಟ್ಟಿದವರು ಮಹಾ ರಸಿಕರು. ಮಹಾ ರಸಿಕರು.ಮಹಾ ರಸಿಕರು.
ಒಪ್ಪಿಕೊಂಡದ್ದ್ನು ಚಾಚೂ ತಪ್ಪದೆ ನಿರ್ವಹಿಸುವ ಗುಣ ನಿಮ್ಮಲ್ಲಿರುತ್ತದೆ. ನಿಮ್ಮ ಶಕ್ತಿ ಮೀರಿದ ಕೆಲಸಕ್ಕೆ ನೀವು ಕೈ ಹಾಕುವುದಿಲ್ಲ. ಆದರೆ ಒಪ್ಪಿಕೊಂಡು ಕೈ ಇಟ್ಟರೆ ಕೆಲಸವನ್ನು ಪೂರ್ತಿ ಮಾಡದೆ ಬಿಡಲ್ಲ. ಆದರೆ ಒಪ್ಪಿಸುವುದೇ ಕಷ್ಟ. ಒಪ್ಪಿಕೊಳ್ಳೋಕೆ ಮುನ್ನ ಆ ಕೆಲಸದ ಎಲ್ಲವನ್ನೂ ಅಳೆದೂತೂಗಿ ನೋಡುತ್ತೀರಿ. ಸಮಸ್ಯೆಯೆಂದರೆ ನಿಮ್ಮ ಹತ್ತಿರದವರೆಲ್ಲ ನಿಮ್ಮಂತೆಯೇ ಇರಬೇಕು ಎಂದು ಬಯಸುತ್ತೀರಿ.
ಭಾನುವಾರ ಹುಟ್ಟಿದ ಪುರುಷರು ಎಷ್ಟು ರಸಿಕರೋ, ಭಾನುವಾರ ಹುಟ್ಟುವ ಹೆಣ್ಣು ಮಕ್ಕಳು ಅದಕ್ಕೆ ತದ್ವಿರುದ್ಧ. ಆದರೆ ಪತಿಗೆ ಪರಮನಿಷ್ಠರಾಗಿರುತ್ತಾರೆ. ಹೆಣ್ಣಾಗಲೀ, ಗಂಡಾಗಲೀ ವೃತ್ತಿ ಜೀವನದಲ್ಲಿ ಉನ್ನತಿ ಎನ್ನುವುದು ಸರಸರನೆ ಸಿಗುತ್ತೆ. ಗಂಡಸರಿಗೆ ಎಚ್ಚರಿಕೆ. 2ನೇ ಪ್ರೇಮ ನೆನಪಿಸಿಕೊಳ್ಳೋಕೂ ಹೋಗಬೇಡಿ. ಕೈಇಟ್ರೋ.. ಕೆಟ್ರಿ. ಅಷ್ಟೆ.
ತಪ್ಪು ಮಾಡಿದರೂ, ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ ಒಪ್ಪಿಕೊಳ್ಳುವ ಗುಣ ಇವರಲ್ಲಿ ಕಡಿಮೆ. ತಪ್ಪಾಯ್ತು ಎಂದು ಹೇಳದೆಯೇ ಬೇಕಾದರೆ ಅಡ್ಜಸ್ಟ್ ಆಗುತ್ತಾರೆ. ತಪ್ಪಾಯ್ತು ಎಂದು ತಲೆತಗ್ಗಿಸೋ ಗುಣದವರೇ ಅಲ್ಲ. ಆದರೆ, ಮನಸ್ಸಿಗೆ ಗೊತ್ತಾಗಿರುತ್ತಲ್ಲ. ಮಾಡಿದ ತಪ್ಪನ್ನು ಮತ್ತೊಮ್ಮೆ ಮಗದೊಮ್ಮೆ ಮಾಡುವ ಗುಣ ಇವರದ್ದಲ್ಲ.
ನೀವು ಪೂಜಿಸಬೇಕಾದ್ದು ಸೂರ್ಯನನ್ನು ಮತ್ತು ಶನಿಯನ್ನು. ಕಷ್ಟಕ್ಕೆ ನೆರವಾಗುವುದು ಗಣಪತಿ ಪೂಜೆ.



