ಈ ರಾಶಿಯವರಿಗೆ ಸತ್ಯವೇ ದೇವರು.. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ..
ಸತ್ಯವೇ ನಮ್ಮ ತಾಯಿ ತಂದೆ.. ಸತ್ಯವೇ ನಮ್ಮ ಬಂಧು ಬಳಗ.. ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು.. ಪುಣ್ಯಕೋಟಿಯ ಕಥೆಯನ್ನು ಯಾರು ತಾನೇ ಕೇಳಿಲ್ಲ. ಆದರೆ.. ಸತ್ಯ ಹೇಳುವ ವಿಚಾರಕ್ಕೆ ಬಂದರೆ ಮಾತ್ರ ತದ್ವಿರುದ್ಧ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುತ್ತಾರೆ. ಆದರೆ ಸುಳ್ಳಿನಲ್ಲಿ ಕಟ್ಟಿದ ಮದುವೆ ಸುಂದರವಾಗಿರುತ್ತಾ ಅನ್ನೋದನ್ನು ಮಾತ್ರ ಹೇಳೋದಿಲ್ಲ.
ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ |
ನಾಸತ್ಯಂ ಚ ಪ್ರಿಯಂ ಬ್ರೂಯಾತ್ ಏಷ ಧರ್ಮಃ ಸನಾತನಃ ||
ಎನ್ನುವುದು ಸಂಸ್ಕೃತದ ಶ್ಲೋಕ. ಇದರ ಅರ್ಥ ಇಷ್ಟೆ. ಸತ್ಯವನ್ನು ನುಡಿಯಬೇಕು, ಕೇಳುವವರಿಗೆ ಇಷ್ಟವಾದದ್ದನ್ನು ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಕೂಡದು ಎಂದರ್ಥ.
ಆದರೆ ಎಲ್ಲರೂ ಸತ್ಯ ಹೇಳಲ್ಲ. ಕೆಲವರು ನೇರವಾಗಿ ಮುಚ್ಚುಮರೆಯಿಲ್ಲದೆ ಹೇಳಿದರೆ, ಕೆಲವರು ನಾವು ಏನಂದುಕೊಳ್ಳುತ್ತೇವೋ ಎನ್ನುವ ಕಾರಣಕ್ಕೆ ಹೇಳುವುದಿಲ್ಲ. ನಮ್ಮಿಂದ ಕೆಲಸ ಆಗಬೇಕಾದಲ್ಲಿ ಇಲ್ಲದೇ ಇರುವುದನ್ನೂ ಹೇಳುತ್ತಾರೆ, ಸುಳ್ಳು ಹೇಳುತ್ತಾರೆ ಕೂಡಾ. ಒಬ್ಬೊಬ್ಬರ ಸುಳ್ಳು ಕಲೆ ಒಂದೊಂದು ರೀತಿ. ಕೆಲವರು ತಮ್ಮನ್ನು ಅಥವಾ ಬೇರೆಯವರನ್ನು ರಕ್ಷಿಸಿಕೊಳ್ಳಲು ಸುಳ್ಳು ಹೇಳಬಹುದು, ಕೆಲವರು ತಮ್ಮ ಬಗ್ಗೆ ಉತ್ತಮವಾದ ಅಭಿಪ್ರಾಯ ಬರಲು ಸುಳ್ಳು ಹೇಳಬಹುದು ಮತ್ತು ಕೆಲವರು ತೊಂದರೆಯಿಂದ ಹೊರಬರಲು ಸುಳ್ಳು ಹೇಳಬಹುದು. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಯಾವುದೇ ಸಂದರ್ಭದಲ್ಲೂ ಸುಳ್ಳಂತೂ ನುಡಿಯಲಾರರು.
ಮೇಷ : ಸತ್ಯವನ್ನು ಹೇಳೋಕೆ ಹೆದರಲ್ಲ. ಆದರೆ ಕೆಲವೊಮ್ಮೆ ತಮ್ಮನ್ನು ತಾವು ಒಳ್ಳೆಯವರೆಂದು ತೋರಿಸಿಕೊಳ್ಳಲು ಸುಳ್ಳು ಕೂಡ ಹೇಳುತ್ತಾರೆ. ಆದರೆ ಅವರೇ ಸತ್ಯವನ್ನೂ ಹೇಳಿಬಿಡುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಪ್ರಾಮಾಣಿಕರು. ಅವರೊಂದಿಗೆ ಜಗಳ ಮಾಡದಿದ್ದರೆ ನೋವುಂಟು ಮಾಡುವವರಲ್ಲ. ಮೇಷ ರಾಶಿಯೊಂದಿಗೆ ಪ್ರಾಮಾಣಿಕವಾಗಿ ಉಳಿಯುವುದು ಯಾವಾಗಲೂ ಒಳ್ಳೆಯದು.
ವೃಷಭ : ಮುಖಕ್ಕೆ ಹೊಡೆಯುವಂತೆ ಸತ್ಯ ಹೇಳುವುದು ಇವರಿಗೆ ಸುಲಭ. ಸುಳ್ಳು ಹೇಳುವುದೇ ಕಷ್ಟ. ಸುಳ್ಳು ಹೇಳೋದ್ರಲ್ಲಿ ಇವರು ಕೆಟ್ಟ ಸುಳ್ಳುಗಾರರು ಎನ್ನಬಹುದು. ಬೆನ್ನ ಹಿಂದೆ ಮಾತನಾಡುವವರಲ್ಲ. ಬದಲಿಗೆ ಏನಾದ್ರೂ ಅಂದ್ಕೊ, ಹೇಳೇ ಹೇಳ್ತೀನಿ ಅನ್ನೊ ಸ್ವಭಾವದವರು.
ಹೀಗಾಗಿ ಇವರಿಗೆ ಶತ್ರುಗಳೂ ಹೆಚ್ಚು. ಮಿತ್ರರೂ ಹೆಚ್ಚು. ಅತ್ಯುತ್ತಮ ಗೈಡ್. ನೇರವಂತಿಕೆಯಿಂದಾಗಿಯೇ ಮಿತ್ರರನ್ನು ದೂರ ಮಾಡಿಕೊಳ್ಳುತ್ತಾರೆ. ಆದರೆ ಅದಕ್ಕಾಗಿ ಕೊರಗುವವರಲ್ಲ.
ಮಿಥುನ : ಸುಳ್ಳುಗಳನ್ನು ಹೇಳುವ ಶೈಲಿಯನ್ನ ವಿಶೇಷವಾಗಿ ರೂಢಿಸಿಕೊಂಡಿರುತ್ತಾರೆ. ತಮ್ಮ ಘನತೆ, ಗೌರವ ಕಳೆದುಕೊಳ್ಳುವ ಭಯದಿಂದ ಈ ರಾಶಿಯವರು ಹೆಚ್ಚು ಸುಳ್ಳು ಹೇಳುತ್ತಾರೆ.
ಕರ್ಕಾಟಕ : ಸತ್ಯ ಹೇಳೋಕೆ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಾರೆ. ಸತ್ಯ ಹೇಳೋಕೇ ಇವರಿಗೆ ಪ್ರೀತಿ. ಆದರೆ ಸುಳ್ಳು ಹೇಳಿದರೂ ಅದನ್ನುನಂಬುವಂತೆ ಹೇಳುವ ಕಲೆಯೂ ಇವರಿಗೆ ಕರಗತ. ಕೇಳಿದವರು ನಿಜವೆಂದು ಒಪ್ಪಿಕೊಳ್ಳಬೇಕು. ಆದರೆ ಸಮಯದ ಲಾಭ ಪಡೆಯುತ್ತಾರೆಯೇ ಹೊರತು ಸಮಯಸಾಧಕತನ ತೋರಿಸುವುದಿಲ್ಲ. ಅನಿವಾರ್ಯವಲ್ಲದಿದ್ದರೆ ಸುಳ್ಳು ಹೇಳುವವರಲ್ಲ.
ಸಿಂಹ : ಸತ್ಯವನ್ನಷ್ಟೇ ಹೇಳುವವರು ಇವರಲ್ಲ. ಜನರನ್ನು ಆಕರ್ಷಿಸಲು ಸುಳ್ಳು ಹೇಳುತ್ತಾರೆ. ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಸುಳ್ಳು ಹೇಳುತ್ತಾರೆ. ಈ ರಾಶಿಯವರು ಸುಳ್ಳು ಹೇಳುವಾಗ ಎದುರಿನವರ ಕಣ್ಣುಗಳನ್ನು ನೇರವಾಗಿ ನೋಡಲ್ಲ. ಇದರ ಹೊರತಾಗಿ ಬೇರೆಯವರನ್ನು ರಕ್ಷಿಸಲು ಸುಳ್ಳು ಹೇಳುತ್ತಾರೆ. ಸತ್ಯ ಹೇಳುವುದಕ್ಕಿಂತ ಹೃದಯದಲ್ಲಿಟ್ಟುಕೊಳ್ಳುವವರು.
ಕನ್ಯಾ : ಅತ್ಯಂತ ಸೂಕ್ಷ್ಮ ಮತ್ತು ಪ್ರಾಮಾಣಿಕರು. ಆದರೆ ಮೋಸಗಾರರು ಮತ್ತು ಬಹಳ ಸುಲಭವಾಗಿ ಪ್ರಭಾವಿತರಾಗುತ್ತಾರೆ. ಅವರು ಪ್ರಾಮಾಣಿಕರು ಆದರೆ ಇತರ ಚಿಹ್ನೆಗಳಿಗಿಂತ ಭಿನ್ನವಾಗಿರುತ್ತಾರೆ, ಅವರು ನಿಮಗೆ ಸತ್ಯವನ್ನು ಹೇಳುವಾಗ ಅದನ್ನು ಬಹಳವಾಗಿ ಪರಿಗಣಿಸುತ್ತಾರೆ. ಸತ್ಯವು ನಿಮ್ಮನ್ನು ನೋಯಿಸದಂತೆ ಅವರು ಯಾವಾಗಲೂ ಖಚಿತಪಡಿಸಿಕೊಳ್ಳುತ್ತಾರೆ. ಅವರು ತುಂಬಾ ಕರುಣಾಮಯಿ ಮತ್ತು ಸಂಪೂರ್ಣವಾಗಿ ಸಂಬಂಧವಿಲ್ಲದ ವಿಷಯದ ಕುರಿತು ನಿಮ್ಮೊಂದಿಗೆ ಮಾತನಾಡುವಾಗ ಸತ್ಯವನ್ನು ಹೇಳಬಹುದು. ಅವರು ಯಾವಾಗಲೂ ಇತರರಿಗೆ ಒಳ್ಳೆಯದನ್ನು ಬಯಸುತ್ತಾರೆ.
ತುಲಾ : ಇವರೂ ಸಹ ಸುಳ್ಳು ಹೇಳುತ್ತಾರೆ. ತಮ್ಮನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಹೇಳುತ್ತಾರೆ. ಸಮಸ್ಯೆಗಳಿಂದ ಹೊರ ಬರಲು ಸತ್ಯವನ್ನು ತಿರುಚುವ ಕೆಲಸ ಮಾಡುತ್ತಾರೆ.
ವೃಶ್ಚಿಕ : ಸುಳ್ಳನ್ನು ಬಹಳ ಸುಲಭವಾಗಿ ಹೇಳುತ್ತಾರೆ. ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಸಮಯ ಸಿಕ್ಕಾಗ ಸುಳ್ಳು ಹೇಳುತ್ತಿರುತ್ತಾರೆ. ಈ ರಾಶಿಯವರು ಸುಳ್ಳು ಕತೆಗಳನ್ನು ಹೇಳುತ್ತಾರೆ.
ಧನು : ಇವರಿಗೂ ಸುಳ್ಳು ಹೇಳೋದು ಕಷ್ಟ. ಪಕ್ಕದಲ್ಲಿರುವವರ ಬಗ್ಗೆ ಸದಾ ಯೋಚಿಸುವ ಇವರು ಅವರ ರಕ್ಷಣೆಗಾಗಿ ಏನು ಬೇಕಾದರೂ ಮಾಡುತ್ತಾರೆ. ಕಠೋರ ಸತ್ಯವನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ಇವರಿಗೆ ಮಾತಿನಲ್ಲಿ ಬೆಣ್ಣೆ ಸವರೋಕೆ ಬರಲ್ಲ. ಸತ್ಯ, ನಿಷ್ಠೆಯನ್ನೇ ಉಸಿರಾಗಿಸಿಕೊಂಡಿರುತ್ತಾರೆ.
ಮಕರ : ಸುಳ್ಳು ಹೇಳುವುದು ಎಷ್ಟರಮಟ್ಟಿಗೆ ಚಟವಾಗಿರುತ್ತದೆಂದರೆ ಎದುರಿಗಿರುವವರಿಗೆ ಗೊತ್ತಾಗಿದೆ ಎಂದು ಗೊತ್ತಿದ್ದರೂ ಸುಳ್ಳು ಹೇಳೋದು ಬಿಡುವುದಿಲ್ಲ. ಸುಳ್ಳುಗಳ ಸರಮಾಲೆಯನ್ನೇ ಕಟ್ಟಿಕೊಡುವ ಇವರಿಗೆ ತಾವು ಹೇಳಿದ ಸುಳ್ಳುಗಳೂ ನೆನಪಿನಲ್ಲಿರಲ್ಲ. ಇನ್ನೊಮ್ಮೆ ಅದೇ ಸುಳ್ಳು ಹೇಳುವಾಗ ಅದನ್ನು ಬಿಟ್ಟು ಬೇರೆ ಹೇಳಿರುತ್ತಾರೆ. ತಮ್ಮನ್ನು ತಾವು ದೊಡ್ಡವರೆಂದು ಬಿಂಬಿಸಿಕೊಳ್ಳಲು ಸುಳ್ಳು ಹೇಳುವುದರಲ್ಲಿ ಇವರು ನಿಸ್ಸೀಮರು.



