2022ರ ಕೊನೆಯ ಮತ್ತು 2ನೇ ಚಂದ್ರಗ್ರಹಣಕ್ಕೆ ದಿನ ಸಮೀಪಿಸುತ್ತಿದೆ. ನವೆಂಬರ್ 8ನೇ ಕಾರ್ತಿಕ ಪೂರ್ಣಿಮೆಯಂದು ರಕ್ತಚಂದ್ರ ಗ್ರಹಣ. ಸೂರ್ಯಗ್ರಹಣದ ಬೆನ್ನಲ್ಲೇ ಬಂದಿರೋ ಈ ಚಂದ್ರಗ್ರಹಣದ ಕಾಲದಲ್ಲಿ ಎಲ್ಲರಿಗೂ ಶುಭವಿಲ್ಲ. ಗ್ರಹಣ ತಂತಾನಾಗೇ ಜನರ ಮನಸ್ಸಿನಲ್ಲಿ ಆತಂಕವನ್ನು ಹುಟ್ಟುಹಾಕುತ್ತದೆ. ಜಗತ್ತಿನೆಲ್ಲೆಡೆ ಸಂಭವಿಸುತ್ತಿರುವ ದುರಂತಗಳು ಇನ್ನಷ್ಟು ಕ್ಲೇಷಮಯ ವಾತಾವರಣ ನಿರ್ಮಾಣ ಮಾಡುತ್ತಿವೆ. ದೆವ್ವಗಳ ಹಬ್ಬದಲ್ಲಿ ನೂರಾರು ಜನ ಹೃದಯಸ್ತಂಭಿಸಿ ಸತ್ತರು. ಗುಜರಾತ್ನಲ್ಲಿ ಸೇತುವೆ ಕುಸಿದು ಸತ್ತರು. ಸೋಮಾಲಿಯಾದಲ್ಲಿ ಬಾಂಬ್ ದಾಳಿಗೆ ಸಿಕ್ಕು ಸತ್ತರು. ಉಕ್ರೇನ್ನಲ್ಲಿ ಯುದ್ಧದಿಂದ ಸತ್ತವರೆಷ್ಟೋ.. ಇಂತಹ ಹೊತ್ತಿನಲ್ಲೇ ಬರುತ್ತಿರುವ ಚಂದ್ರಗ್ರಹಣವು ಸಂಪೂರ್ಣ ರೆಡ್ ಮೂನ್ ಗ್ರಹಣವಾಗಿರುವುದು ಆತಂಕ. ಈ ಚಂದ್ರಗ್ರಹಣದ ಪರಿಣಾಮವು ಎಲ್ಲ 12 ರಾಶಿಗಳ ಮೇಲೆ ಏನಿರಲಿದೆ? ಇಲ್ಲಿ ಯಾವುದನ್ನು ಮಾಡಬೇಕು? ಏನನ್ನು ಮಾಡಬಾರದು ಎಂಬ ಸೂಚನೆಗಳಿವೆ. ದಯವಿಟ್ಟು ಅದನ್ನು ಪಾಲಿಸಿ.
ಮೇಷ : ಸಂಘರ್ಷಕ್ಕೆ ಜಗಳಕ್ಕೆ ಆಸ್ಪದ ಕೊಡುವ ಸಮಯ ಇದಲ್ಲ. ಯಾರಾದರೂ ಜಗಳಕ್ಕೆ ಬಂದರೆ ತಪ್ಪು ನಿಮ್ಮದಲ್ಲದೇ ಹೋದರೂ ಶಾಂತವಾಗಿರಿ.ಖರ್ಚು ಕಂಟ್ರೋಲಿನಲ್ಲಿರಲಿ. ಡ್ರೈವಿಂಗ್ ಮಾಡುವಾಗ ಮೈಯೆಲ್ಲ ಕಣ್ಣಾಗಿರಲಿ. ವಾಕ್ ತಪ್ಪಿಸಬೇಡಿ. ಆರೋಗ್ಯ ಹದಗೆಡದಂತೆ ನೋಡಿಕೊಳ್ಳಿ. ಒಂದಿಷ್ಟು ದುಡ್ಡಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿಗೆ. ದುಡ್ಡು ಜಾಗ್ರತೆ.
ವೃಷಭ : ದಂಪತಿಗಳು ತಾಳ್ಮೆಯಿಂದಿರಿ. ಪರಸ್ಪರ ಮಾತುಕತೆ ಶಾಂತವಾಗಿರಲಿ. ಗಂಡ ಹೆಂಡತಿ ಮಧ್ಯೆ ಜಗಳವಾಗುವ ಆತಂಕವಿದೆ. ಅಹಂಕಾರವನ್ನು ಪಕ್ಕಕ್ಕಿಡಿ. ನಾನು ಹೇಳಿದ್ದೇ ಸರಿ ಎಂಬ ಹಠ ಪತಿ-ಪತ್ನಿ ಮಧ್ಯೆ ತಲೆದೋರದಂತೆ ಎಚ್ಚರವಹಿಸಿ. ಅನುಮಾನಗಳು ಉದ್ಭವವಾಗುವ ಸಮಯ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ. ಎಲ್ಲ ಸಂಬಂಧಗಳಲ್ಲಿ ಸ್ನೇಹದಲ್ಲಿ ಇದನ್ನು ಪಾಲಿಸಿ. ಸಾಲ ಕೊಟ್ಟ ಹಣ ವಾಪಸ್ ಬರುವ ಸಾಧ್ಯತೆಯುಂಟು.
ಮಿಥುನ : ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೊಸ ಸಾಲಕ್ಕೆ ಖಂಡಿತಾ ಕೈ ಹಾಕಬೇಡಿ. ಹೊಟ್ಟೆಯಲ್ಲಿ ಒಂದಿಷ್ಟು ಸಮಸ್ಯೆ ತಲೆದೋರಬಹುದು. ಹಿಂದಿನ ತಪ್ಪುಗಳಿಗೆ ಕ್ಷಮೆ ಕೇಳಲು ಇದು ಸರಿಯಾದ ಸಮಯ. ಕೆಲಸದ ಹೊರೆ ಹೆಚ್ಚಾಗಲಿದೆ. ಆದರೆ ಪ್ರತಿಸ್ಫರ್ಧಿಗಳೂ ಸಹಾಯ ಮಾಡುವಂತ ಯೋಗವಿದೆ.
ಕರ್ಕಾಟಕ : ಗ್ರಹಣವು ಪ್ರೇಮಕ್ಕೆ ಶುಭ ಕಾಲ. ಗ್ರಹಣ ಚಂದ್ರನಿಗಿರಬಹುದು. ಪ್ರೀತಿಗಲ್ಲ. ಪ್ರೀತಿ-ಪ್ರೇಮ ಪ್ರಜ್ವಲಿಸುವ ಕಾಲ ಇದು. ಪ್ರೇಮಿಯ ಬೆಂಬಲವೇ ಈಗ ನಿಮ್ಮ ಶ್ರೀರಕ್ಷಾ ಕವಚ. ಯಾವುದೇ ಕೆಲಸದಲ್ಲಿ ಅನಗತ್ಯ ಗಡಿಬಿಡಿ ಬೇಡ. ಮೊದಲು ತೆಗೆದುಕೊಂಡ ನಿರ್ಧಾರ ಕೆಲವೇ ಸಮಯದ ನಂತರ ತಪ್ಪು ಎನಿಸುತ್ತದೆ. ಯೋಚಿಸಿ, ಹೆಜ್ಜೆಯಿಡಿ. ತಕ್ಷಣ ಯಾವುದಕ್ಕೂ ನಿರ್ಧಾರ ಪ್ರಕಟಿಸುವುದು ಬೇಡ.

ಸಿಂಹ : ಕರ್ಕಾಟಕದವರಿಗೆ ಪ್ರೇಮಿ ರಕ್ಷಾಕವಚವಾದರೆ ಸಿಂಹರಾಶಿಯವರಿಗೆ ತಾಯಿಯೇ ರಕ್ಷಣೆ. ತಾಯಿಯನ್ನು ಸಂತೋಷವಾಗಿಟ್ಟುಕೊಂಡಷ್ಟೂ ನಿಮ್ಮ ಜೀವನ ಏರುಗತಿಯಲ್ಲಿರುತ್ತದೆ. ಆರೋಗ್ಯ, ಹಣಕಾಸು ಸಮಸ್ಯೆಗಳಿರುತ್ತವೆ. ಮೇರಾ ಪಾಸ್ ಮಾ ಹೈ. ಎನ್ನುತ್ತಾ ಹೋಗಿ. ಅದನ್ನೇ ನಂಬಿ. ತಾಯಿಯ ಪ್ರೀತ ಎಲ್ಲ ಗ್ರಹಣ ದೋಷಗಳನ್ನೂ ನಿವಾರಿಸುವ ಶಕ್ತಿ ಹೊಂದಿದೆ. ಮನೆಯಲ್ಲಿ ಹೊಸ ಜವಾಬ್ದಾರಿಗಳು ಬರುತ್ತವೆ. ಖುಷಿಯಿಂದ ಒಪ್ಪಿಕೊಳ್ಳಿ. ಹಳೆ ಸಾಲ ಇನ್ನೂ ಎಷ್ಟು ದಿನ ಇಟ್ಕೊಂಡಿರ್ತೀರಿ. ತೀರಿಸಿಬಿಡಿ.
ಕನ್ಯಾ : ಗ್ರಹಣವು ಇದ್ದಕ್ಕಿದ್ದಂತೆ ಇನ್ ಸೆಕ್ಯುರಿಟಿ ಫೀಲಿಂಗ್ ಕೊಡುತ್ತೆ. ಏನೂ ಮಾಡೋಕಾಗಲ್ಲ. ಅನುಭವಿಸಬೇಕು. ಬಂದಿದ್ದೆಲ್ಲ ಬರಲಿ.. ಗೋವಿಂದನ ದಯೆಯಿರಲಿ ಎಂಬ ಮಂತ್ರ ಪಾಲಿಸಿಬಿಡಿ. ಸಾಕು. ಮನಸ್ಸನ್ನು ಆದಷ್ಟು ಶಾಂತವಾಗಿರಿಸಿಕೊಳ್ಳಲು ಪ್ರಯತ್ನಿಸಿ. ತಮ್ಮಂದಿರ ಮೇಲೆ ನಿಗಾ ಇರಲಿ. ಆರೋಗ್ಯ ಹದ ತಪ್ಪಬಹುದು. ಮಾತಿನಲ್ಲಿ ಸ್ಪಷ್ಟತೆಯಿರಲಿ. ಹೊಸ ಹೊಸ ಜವಾಬ್ದಾರಿಗಳಿಗೆ ತಲೆ ಕೊಡಬೇಡಿ. ನಿರ್ಧಾರ ಯಾವುದೇ ಇರಲಿ, ಮನಸ್ಸು ಶಾಂತವಾಗಿದ್ದರೆ ಮಾತ್ರ ತೆಗೆದುಕೊಳ್ಳಿ. ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಸಬೇಡಿ.

ತುಲಾ : ಗ್ರಹಣವು ನಿಮ್ಮ ಕುಟುಂಬ ಮತ್ತು ಹಣಕಾಸಿನ ಮೇಲೆ ಪರಿಣಾಮ ಬೀರುತ್ತದೆ. ಆಸ್ತಿಪತ್ರಗಳನ್ನೆಲ್ಲ ಒಮ್ಮೆ ಪರಿಶೀಲಿಸಿಕೊಳ್ಳಿ. ಬ್ಯಾಂಕ್ ದಾಖಲೆಗಳನ್ನೆಲ್ಲ ಮತ್ತೊಮ್ಮೆ ನೋಡಿ. ಸಹೋದರರ ಬೆಂಬಲಕ್ಕೆ ನಿಲ್ಲಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ಕಣ್ಣಿನ ಸಮಸ್ಯೆ ಇರುವವರು ಮತ್ತೊಂದ್ಸಲ ಚೆಕ್ ಮಾಡಿಸಿ. ಹಣಕಾಸಿನ ವಿಷಯದಲ್ಲಿ ಕತ್ತಿಯ ಮೇಲಿನ ನಡಿಗೆ. ಖರ್ಚು ಮಾಡದಿದ್ದರೂ ನಷ್ಟ. ಖರ್ಚು ಮಾಡಿದರೂ ನಷ್ಟ ಎಂಬ ಪರಿಸ್ಥಿತಿಯಿದೆ. ಎಚ್ಚರಿಕೆ.
ವೃಶ್ಚಿಕ : ನಿಮ್ಮ ಆತ್ಮವಿಶ್ವಾಸಕ್ಕೆ ಬೂಸ್ಟ್ ಕೊಡುವ ಸಮಯ. ನಿಮ್ಮ ವಿಷಯಕ್ಕೆ ಬಂದರೆ ಪರ್ಸನಲ್ ಆಗಿಯೂ ಗ್ರಹಣವೇ. ಆದರೆ ಎಚ್ಚರಿಕೆಯೊಂದಿದ್ದರೆ ಅದನ್ನೇ ಫಲದಾಯಕವನ್ನಾಗಿಸಿಕೊಳ್ಳಬಹುದು. ಎಸೆಯುವ ಪ್ರತಿ ಕಲ್ಲನ್ನೂ ಮೆಟ್ಟಿಲನ್ನಾಗಿಸಿಕೊಳ್ಳಬಹುದು. ಕಷ್ಟ ಯಾರಿಗ್ ಬರಲ್ಲ. ಮನುಷ್ಯರಿಗಲ್ಲದೆ ಮರಕ್ಕೆ ಬರುತ್ತಾ.. ಅನ್ನೊ ಗಾದೆ ಕೇಳಿದ್ದೀರಲ್ಲ. ಗ್ರಹಣ ಹರಿಯುತ್ತಿದ್ದಂತೆ ತಿಳಿಯಾಗಲಿದೆ.


ಮಕರ : ನಿಮ್ಮ ಲಾಭ ಮತ್ತು ಮಹತ್ವಾಕಾಂಕ್ಷೆಗೆ ಬ್ರೇಕ್ ಹಾಕಿ. ರಾತ್ರೋರಾತ್ರಿ ಶ್ರೀಮಂತರಾದವರು ಯಾರೂ ಇಲ್ಲ. ದುರಾಸೆಗೆ ಬೀಳಬೇಡಿ. ಅತಿಯಾದ ಲಾಭ ತಂದು ಕೊಡಲಿದೆ ಎಂದು ಕುದುರೆಯೇರಿ ಹೊರಡಬೇಡಿ. ಅದು ಬಿಸಿಲುಗುದುರೆ. ಸಂಬಂಧಗಳನ್ನು ಅದರಲ್ಲೂ ಸೋದರ-ಸೋದರಿಯರ ಜೊತೆ ಸಂಬಂಧ ಚೆನ್ನಾಗಿಟ್ಟುಕೊಳ್ಳಿ.
ಕುಂಭ : ನಿಮ್ಮ ವೃತ್ತಿಪರ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಗ್ರಹಣದ ಪ್ರಭಾವ ಇದೆ. ನಿಮ್ಮ ಇಮೇಜ್ ಬಗ್ಗೆ ಎಚ್ಚರಿಕೆಯಿರಲಿ. ಸ್ವಲ್ಪ ಯಾಮಾರಿದರೂ ಇಷ್ಟು ವರ್ಷ ಗಳಿಸಿಕೊಂಡು ಬಂದಿದ್ದ ಹೆಸರೆಲ್ಲ ತೊಳೆದುಹೋಗಬಹುದು. ಯಾರ ಜೊತೆ ವ್ಯವಹರಿಸುತ್ತೇವೆ ಎಂಬುದು ಮುಖ್ಯ. ಅಪರಿಚಿತರೊಂದಿಗೆ, ಪರಿಚಿತರಾಗಿದ್ದರೂ ವ್ಯವಹಾರ ಇಲ್ಲದವರ ಜೊತೆಗೆ ಹೊಸ ವ್ಯವಹಾರ ಬೇಡ. ನಿಮ್ಮನ್ನು ಪ್ರೀತಿಸುವವರನ್ನು ಗುರುತಿಸುವಲ್ಲಿ ಎಡವುತ್ತಿದ್ದೀರಿ.
ಮೀನ : ತಂದೆ ಇರುವವರು ತಂದೆಯ ಮಾರ್ಗದರ್ಶನ ಪಡೆದುಕೊಳ್ಳಿ. ನಿಮ್ಮನ್ನು ಆಪತ್ತಿನಿಂದ ಕಾಪಾಡುವ ಶಕ್ತಿ ಅವರಿಗೆ ಇದೆ. ತಂದೆಯ ಸ್ಥಾನದಲ್ಲಿರುವವರಿಂದಲೂ ಶುಭವಾಗಲಿದೆ. ಪ್ರೀತಿಯಿಂದ ಮಾತನಾಡಿ. ನೈತಿಕವಾಗಿ ಹಾದಿ ತಪ್ಪಬೇಡಿ. ಕರ್ಮಣ್ಯೇವಾಧಿಕಾರಸ್ತೇಮಾಫಲೇಶುಕದಾಚನ.



