ಕರ್ನಾಟಕ ರಾಜ್ಯದ ತ್ರಿವಿಧ ದಾಸೋಹಿ ಮಠಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರೋ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠ. ಶಿವಕುಮಾರ ಸ್ವಾಮೀಜಿಗಳ ಶಿವೈಕ್ಯದ ನಂತರ ಸಿದ್ಧಲಿಂಗ ಸ್ವಾಮೀಜಿಗಳು ಮಠದ ನೇತೃತ್ವ ವಹಿಸಿದ್ದರು. ಶಿವಕುಮಾರ ಸ್ವಾಮೀಜಿ ಅವರೇ ಉತ್ತರಾಧಿಕಾರಿ ನೇಮಿಸಿದ್ದರು. ಸಿದ್ಧಗಂಗಾ ಮಠದ ಸಂಪ್ರದಾಯದಂತೆ ಈಗ ಹೊಸ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ.
ಸಿದ್ದಗಂಗಾ ಪಾಲಿಟೆಕ್ನಿಕ್ ಉಪನ್ಯಾಸಕ ಮನೋಜ್ ಕುಮಾರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು ನೇಮಿಸಿದ್ದಾರೆ. ಮನೋಜ್ ಕುಮಾರ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೈಲನಹಳ್ಳಿಯವರಾಗಿದ್ದಾರೆ. ಷಡಕ್ಷರಿ, ವಿರೂಪಾಕ್ಷಮ್ಮ ದಂಪತಿಗಳು ಮನೋಜ್ ಕುಮಾರ್ ಅವರ ತಂದೆ-ತಾಯಿಯಾಗಿದ್ದು, ಮನೋಜ್ ಕುಮಾರ್ ಅವರು ಬಿಎಸ್ಸಿ, ಎಂಎಸ್ಸಿ, ಎಂಎ ವಿದ್ವತ್ ವಿದ್ಯಾಭ್ಯಾಸ ಮಾಡಿದ್ದಾರೆ.
ಏ.23ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಪುಣ್ಯ ದಿನದಂದು ಶ್ರೀ ಸಿದ್ಧಗಂಗಾ ಮಠದಲ್ಲಿ ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ನಡೆಯಲಿದೆ.



