ಇಂದು ಜನವರಿ 26. ದೇಶಕ್ಕೆ ಗಣರಾಜ್ಯೋತ್ಸವ ದಿನವೂ ಹೌದು. ವಸಂತ ಪಂಚಮಿಯೂ ಹೌದು. ಅವುಗಳನ್ನೆಲ್ಲ ಬಿಟ್ಟು ನೋಡಿದರೆ ಈ ದಿನ ವಿದ್ಯಾರಂಭಕ್ಕೆ ಶುಭದಿನ. ಉತ್ತರಾಯಣದಲ್ಲಿ ವಿದ್ಯಾರಂಭ ಸಂಸ್ಕಾರ ಮಾಡುವುದು ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಕ್ಕಾಗಿ ದ್ವಿತೀಯ, ತೃತೀಯಾ, ಪಂಚಮಿ, ಷಷ್ಠಿ, ದಶಮಿ, ಏಕಾದಶಿ, ದ್ವಾದಶಿ ತಿಥಿಗಳನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ವಸಂತ ಪಂಚಮಿ, ಬುಧವಾರ, ಸೋಮವಾರ, ಗುರುವಾರ ಮತ್ತು ಶುಕ್ರವಾರದಂದು ವಿದ್ಯಾರಂಭ ಸಂಸ್ಕಾರವನ್ನು ಮಾಡುವುದು ಅನುಕೂಲಕರವಾಗಿದೆ. ಮಗುವು ಶಿಕ್ಷಣಕ್ಕೆ ಅರ್ಹ ವಯಸ್ಸಿಗೆ ಬಂದಾಗ, ಅಂದರೆ 3ರಿಂದ 5 ವರ್ಷದ ಮಕ್ಕಳಿಗೆ ವಿದ್ಯಾರಂಭ ಸಂಸ್ಕಾರವನ್ನು ನಡೆಸಲಾಗುತ್ತದೆ. ಐದು ವರ್ಷದ ಮಗುವಿನ ವಿದ್ಯಾರಂಭ ಸಂಸ್ಕಾರವನ್ನು ಗ್ರಂಥಗಳಲ್ಲಿ ವಿವರಿಸಲಾಗಿದೆ. ವಸಂತ ಪಂಚಮಿಯಂದು ಮಕ್ಕಳ ವಿದ್ಯಾರಂಭ ಮಾಡಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಗುವಿನ ಬುದ್ಧಿವಂತಿಕೆ ಹೆಚ್ಚುತ್ತದೆ ಮತ್ತು ಅವನು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸುತ್ತಾನೆ.


ಅಕ್ಷರಾಭ್ಯಾಸವೆಂದರೆ ಓಂಕಾರ ಬರೆಸುವುದು ಎಂಬುದೇ ಎಲ್ಲರ ನಂಬುಗೆ. ಹೌದು, ಅದರಲ್ಲಿ ತಪ್ಪೇನಿಲ್ಲವಾದರೂ ಅದಕ್ಕೂ ಮುನ್ನ ಕೆಲವು ಶಾಸ್ತ್ರ, ಸಂಪ್ರದಾಯಗಳಿವೆ. ಎಂದಿನಂತೆ ಅಕ್ಷರಾಭ್ಯಾಸದಲ್ಲಿಯೂ ಗಣೇಶನಿಗೇ ಪ್ರಥಮ ಪೂಜೆ. ಆನಂತರ ಸರಸ್ವತಿ ಪೂಜೆ. ಅದಾದ ಮೇಲೆ ಲೇಖನಿ ಪೂಜೆ, ಪಟ್ಟೆ ಪೂಜೆ ಅರ್ಥಾತ್ ಸ್ಲೇಟಿನ ಪೂಜೆ, ಅದು ಮುಗಿದ ಮೇಲೆ ಗುರು ದೇವೋನಮಃ. ಗುರುವಿನ ಪೂಜೆ. ಅಂತಿಮವಾಗಿ ಅಗ್ನಿ ದೇವರ ಎದುರು ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಿ ಓಂಕಾರ ಬರೆಯುವುದು. ಇದು ಅಕ್ಷರಾಭ್ಯಾಸದ ಸೂತ್ರಗಳು.




ಈ ಮಂತ್ರವನ್ನು ಜಪಿಸಿ ಸರಸ್ವತಿಯ ಪಾದಪೂಜೆ ಮಾಡಿ.
ಲೇಖನಿ ಪೂಜೆ ವೇಳೆ : ಪುರುದಾಸ್ಮೋ ವಿಶುರೂಪ ಇಂದು: ಅಂತಮರ್ಹಿಮನ್ಮನಂಜಧೀರಃ. ಏಕಪಾದಿಂ ದ್ವಿಪದಿಂ ತ್ರಿಪದಿಂ ಚತುಷ್ಪಾದಿಂ, ಅಷ್ಟಪದಿ ಭುವನಾನು ಪ್ರಥಂತ ಸ್ವಾಹಾ
ಈ ಮಂತ್ರವನ್ನು ಜಪಿಸಿ, ಪೆನ್ನು, ಪುಸ್ತಕಗಳನ್ನೆಲ್ಲ ಇಟ್ಟು ಅಕ್ಕಿಯ ಮೇಲೆ ಓಂಕಾರ ಬರೆಯಬೇಕು.


ಈ ಮಂತ್ರವನ್ನು ಜಪಿಸಿ ಸ್ಲೇಟಿಗೆ ಅರಿಶಿನ, ಕುಂಕುಮದಿಂದ ಪೂಜಿಸಿ


ಬೃಹಸ್ಪತೇ ಅತಿ ಯದಯೋರ್, ಅಹರ್ದ್ಧ್ಯುಮ್ದ್ವಿಭಾತಿ ಕ್ರತುಮಜ್ಜ್ಞೇಷು, ಯದ್ದಿದಯಚ್ಛ್ವಾಸ ಋತ್ಪ್ರಜಾತ್, ತದ್ಸ್ಮಾಸು ದ್ರವಿಣಂ ಧೇಹಿ ಚಿತ್ರಮ್ । ಉಪಯಂಗೃಹೀತೋಸಿ ಬೃಹಸ್ಪತಯೇ, ತ್ವಯಿಷ್ ತೋ ಯೋನಿಬೃಹಸ್ಪತಯೇ ತ್ವಾ॥ ಶ್ರೀ ಗುರುವೇ ನಮಃ. ಆವಾಹಯಾಮಿ, ಸ್ಥಯಾಮಿ, ಧ್ಯಾಯಾಮಿ
ಇದೆಲ್ಲ ಆದ ಮೇಲೆ ಕೊನೆಯ ಹಂತಕ್ಕೆ ಬರುತ್ತೀರಿ. ಆಗ ಅಗ್ನಿಗೆ 5 ಬಾರಿ ನೈವೇದ್ಯ ಅರ್ಪಿಸಿ
ಓಂ ಸರಸ್ವತಿ ಮಾಂಸ ಪೇಶಲಂ, ವಸು ನಾಸತ್ಯಭ್ಯಾಂ ವಾಯತಿ ದಶಾರ್ಥಂ ವಪು:. ರಸಂ ಪರಿಶ್ರುತಾ ನ ರೋಹಿತ್, ನಗ್ನಹುಧಿರಸ್ತಸಾರಂ ನ ವೇಂ ಸ್ವಾಹಾ ॥ ಇದಂ ಸರಸ್ವತ್ಯೈ ಇದಂ ನ ಮಮ್
ಈ ಮಂತ್ರವನ್ನು ಹೇಳಿ. ಆಮೇಲೆ ಸ್ಲೇಟಿನ ಮೇಲೆ ಓಂಕಾರ ಬರೆಸಿ.



