ಇನ್ನೇನು ಕೆಲವೇ ಗಂಟೆಗಳಲ್ಲಿ ಗ್ರಹಣ ಪ್ರಾಪ್ತಿಯಾಗಲಿದೆ. ಭಾರತದಲ್ಲಿ ಸಂಭವಿಸುವ ಪಾಶ್ರ್ವಕಾಲದ ಸೂರ್ಯಗ್ರಹಣ ಮಂಗಳವಾರ ಅಮಾವಾಸ್ಯತೆ ಚಿತ್ತಾ ನಕ್ಷತ್ರದಲ್ಲಿ ಸಂಭವಿಸಲಿದೆ. ತುಲಾ ರಾಶಿಯಲ್ಲೇ ಸಂಭವಿಸುವ ಕೇತುಗ್ರಸ್ತ ಗ್ರಹಣ. ಚಂದ್ರನ ಸಂವಹನವು ಹಗಲು ರಾತ್ರಿ ತುಲಾ ರಾಶಿಯಲ್ಲಿರುತ್ತದೆ. ಜೊತೆಗೆ ಸೂರ್ಯ, ಶುಕ್ರ, ಕೇತು ಸಹ ಈ ರಾಶಿಯಲ್ಲಿ ಉಳಿಯುತ್ತಾನೆ. ಸೂರ್ಯಗ್ರಹಣದ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಈ ಗ್ರಹಣವು 4 ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಸ್ಪರ್ಶಕಾಲ ಸಂಜೆ 5 ಗಂಟೆ 2 ನಿಮಿಷಕ್ಕೆ.
ಮಧ್ಯಕಾಲ ಸಂಜೆ 5 ಗಂಟೆ 47 ನಿಮಿಷಕ್ಕೆ.
ಗ್ರಹಣ ಮೋಕ್ಷವಾಗುವುದು ಸಂಜೆ 6 ಗಂಟೆ 20 ನಿಮಿಷಕ್ಕೆ.
ಈ ಗ್ರಹಣ ಸಂಭವಿಸುವುದು ತುಲಾ ರಾಶಿಯಲ್ಲಿ. ಆದರೆ ಈ ಗ್ರಹಣದ ಗ್ರಹಕಾಲದ ಫಲ ಸಿಂಹ, ಧನು, ಮಕರ, ವೃಷಭ ಈ ರಾಶಿಯವರಿಗೆ ಶುಭ ಫಲವನ್ನೇ ಕೊಡಲಿದೆ ಎಂದು ಜ್ಯೋತಿಷ್ಯ ತಜ್ಞರು ಅಬಿಪ್ರಾಯ ಪಟ್ಟಿದ್ದಾರೆ.
ಕನ್ಯಾ, ಕುಂಭ, ಮೇಷ ಹಾಗೂ ಮಿಥುನ ರಾಶಿಯವರಿಗೆ ಮಿಶ್ರ ಫಲ ದೊರೆಯಲಿದೆ. ಅಶುಭವೆಂದು ತೋರುತ್ತಿರುವುದು ತುಲಾ, ವೃಶ್ಚಿಕ, ಮೀನ ಹಾಗೂ ಕರ್ಕಾಟಕ ರಾಶಿವಯರಿಗೆ ಮಾತ್ರ. ಹಾಗೆಂದು ಏನೋ ಕೆಡುಕಾಗುತ್ತದೆ ಎಂದು ಆತಂಕ ಪಡಬೇಕಿಲ್ಲ. ಯಾವ ರಾಶಿಯವರೂ ಆತಂಕಗೊಳ್ಳಬೇಕಾಗಿಯೂ ಇಲ್ಲ.
ಮೇಷ : ಗ್ರಹಣದಲ್ಲಿ ಮಿಶ್ರಫಲವಿದೆಯೆಂದು ಆತಂಕಗೊಳ್ಳಬೇಡಿ. ಆತ್ಮವಿಶ್ವಾಸದಿಂದ ನಿಮ್ಮನ್ನು ನೀವು ಉದ್ದೇಶಿತ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ವ್ಯಾಪಾರ, ವ್ಯವಹಾರದಲ್ಲಿ ಜಾಗ್ರತೆಯಿರಲಿ. ಕುಟುಂಬದವರೊಂದಿಗೆ ತಿಳಿಸದೆ ಯಾವುದೇ ಹೊಸ ಸಾಹಸಕ್ಕೆ ಕೈ ಹಾಕಬೇಡಿ. ದೇವರಿದ್ದಾನೆ.
ವೃಷಭ : ಸೋಮಾರಿತನ ಬಿಟ್ಟರೆ ಸಾಕು. ಗ್ರಹಣದ ಶುಭ ಫಲಗಳನ್ನು ಪಡೆಯಬಹುದು. ನಿಮ್ಮ ಶಕ್ತಿ ಸಾಮಥ್ರ್ಯವನ್ನೆಲ್ಲ ವಿನಿಯೋಗಿಸಿ ಕೆಲಸ ಮಾಡಿದರೆ ಕೆಲಸ ಕಟ್ಟಿಟ್ಟ ಬುತ್ತಿ. ಗ್ರಹಣ ಶುಭ ಫಲವಿದೆಯೆಂದು ಸುಮ್ಮನೆ ಕುಳಿತರೆ ಯಾವ ದೇವರು ಏನು ತಾನೇ ಮಾಡಿಯಾನು?

ಮಿಥುನ : ಗ್ರಹಣದ ಲೆಕ್ಕದಲ್ಲಿ ಮಿಶ್ರಫಲವಿದೆ. ಆದರೆ ಮದುವೆಯಾಗಿರುವವರು ಪತಿ-ಪತ್ನಿ ಸಮೇತರಾಗಿ ಶಿವಪಾರ್ವತಿಯರಂತೆ, ನಾರಾಯಣಲಕ್ಷ್ಮಿಯಂತೆ ಒಟ್ಟಾಗಿದ್ದರೆ ಮಿಶ್ರ ಫಲವೇ ಶುಭ ಫಲವಾಗಲಿದೆ. ಕೋಪದ ಕೈಗೆ ಮನಸ್ಸು ಕೊಡಬೇಡಿ.
ಕಟಕ : ಗ್ರಹಣದ ನಕ್ಷತ್ರಗಳೆಲ್ಲ ನಿಮ್ಮ ಪರವಾಗಿವೆ. ತಂದೆ ತಾಯಿ ಆಶೀರ್ವಾದವಿರಬೇಕು. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳದವರಿಗೆ ಗ್ರಹಣದ ಲಾಭ ಸಿಗುವುದಿಲ್ಲ. ತಂದೆ ತಾಯಿಯನ್ನು ದೂರವಿಟ್ಟಿದ್ದವರು ಅವರನ್ನು ಪ್ರೀತಿಯಿಂದ ಮನೆ ತುಂಬಿಸಿಕೊಳ್ಳಿ. ತಂದೆ ತಾಯಿ ಜೊತೆಯಲ್ಲಿದ್ದವರು ಅವರ ಸಲಹೆಯಂತೆ ಮುನ್ನುಗ್ಗಿ. ಗ್ರಹಣದ ಶಾಪವನ್ನು ಅವರೇ ನಿವಾರಿಸುತ್ತಾರೆ.
ಸಿಂಹ : ಶುಭ ಫಲವಂತೂ ಇದೆ. ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಮರೆಯಬೇಡಿ. ಕಾಯಕವೇ ಕೈಲಾಸ ಎನ್ನುವುದನ್ನೂ ಮರೆಯಬೇಡಿ. ಶುಭ ಫಲ ಬರುವ ಹೊತ್ತಲ್ಲಿ ಮೈಮರೆತು ಸೋಮಾರಿಗಳಾಗಿ ಇರಬೇಡಿ.
ಕನ್ಯಾ : ಹಿರಿಯರ ಸೇವೆ, ಆರೈಕೆ ನೀವು ಮಾಡಿ. ಗೆಲುವಿನ ಆಶೀರ್ವಾದ ಹಾರೈಕೆ ಅವರು ಮಾಡುತ್ತಾರೆ. ಪ್ರೀತಿಯಿಂದ ನಗುಮೊಗದಿಂದ ಇರಿ. ಗ್ರಹಣದಲ್ಲಿ ಒಳ್ಳೆಯ ಫಲವೇ ಇದೆ.
ತುಲಾ : ಮೋಜು, ಚಟಗಳಿಂದ ದೂರವಿದ್ದು ದೇವರ ಪೂಜೆ ಮಾಡಿ. ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಗ್ರಹಣದಲ್ಲಿ ಅಶುಭವಿದೆಯೆಂದು ತಲೆ ಕೆಡಿಸಿಕೊಳ್ಳಬೇಡಿ. ಧರ್ಮೋ ರಕ್ಷತಿ ರಕ್ಷಿತಃ. ಧರ್ಮದ ಮಾರ್ಗ ಬಿಡಬೇಕಾದ ಸಂದರ್ಭ ಬರುತ್ತದೆ. ಧರ್ಮವನ್ನು ಮಾತ್ರ ಬಿಡಬೇಡಿ.

ವೃಶ್ಚಿಕ : ಮನಸ್ಸಿನ ಮೇಲೆ ನಿಯಂತ್ರಣವಿರಲಿ. ಅದರಲ್ಲೂ ಹಣದ ವಿಚಾರದಲ್ಲಿ. ಕೈಲಿರುವ ಹಣವನ್ನು ದುಂದುವೆಚ್ಚ ಮಾಡುವುದು ಬೇಡ. ಆಯಾಸ, ದೈಹಿಕ ದೌರ್ಬಲ್ಯ ಕಾಡುತ್ತವೆ. ಗ್ರಹಣದ ಪ್ರಭಾವ. ತಾಳ್ಮೆಯಿರಲಿ. ಕೋಪಕ್ಕೆ ಅಣೆಕಟ್ಟು ಕಟ್ಟಿಕೊಳ್ಳಿ. ಸ್ವಲ್ಪ ದಿನ.. ಎಲ್ಲವೂ ಶುಭವಾಗಲಿದೆ.
ಧನು : ಗ್ರಹಣದಲ್ಲಿ ಶುಭ ಫಲಗಳೇ ಇವೆ. ಅಷ್ಟೇಕೆ ಕೋಪಗೊಳ್ಳುತ್ತೀರಿ. ತಪ್ಪುಗಳನ್ನು ಒಪ್ಪಿಕೊಳ್ಳಿ. ಮನಸ್ಸು ಶಾಂತವಾಗಿದ್ದರೆ ಹೊಸ ಮಾರ್ಗ ತೆರೆಯಲಿದೆ. ಶುಭ ಕಾಲ ಕೂಡಿ ಬರುವಾಗ ದಾರಿಯನ್ನು ಮುಚ್ಚಿಕೊಳ್ಳಬೇಡಿ.
ಮಕರ : ಗ್ರಹಣ ಕಾಲದಲ್ಲಿ ಬಂಧು ಬಾಂಧವರ ಜೊತೆ ಚೆನ್ನಾಗಿರಿ. ಶುಭ ಫಲ ಶುಭ ಕಾಲ ಕೂಡಿ ಬರುತ್ತಿದೆ. ಮನಸ್ಸು ತಿಳಿಯಾಗಿರಲಿ. ಮಕ್ಕಳ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು.
ಕುಂಭ : ಮನಸ್ಸಿನಂತೆ ಮಾದೇವ ಎನ್ನುವುದು ಸತ್ಯ. ಸ್ವಲ್ಪ ಸ್ವಾರ್ಥವಿರಲಿ. ಹಾಗೆಂದು ಪ್ರೀತಿಸುವವರನ್ನು ದೂರ ಮಾಡಿಕೊಳ್ಳುವುದಲ್ಲ. ಗ್ರಹಣದ ಮಿಶ್ರ ಫಲವೇ ಅದು. ನೀವು ಮಾಡುವ ಕೆಲಸ ನಿಮಗೆ ಯಶಸ್ಸು ಕೊಡಬಹುದು. ದೀರ್ಘಕಾಲದಲ್ಲಿ ಸಂಬಂಧಗಳನ್ನು ಕೆಡಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ.
ಮೀನ : ಯಾವ ಗ್ರಹಣದ ಮಿಶ್ರ ಫಲವಿದ್ದರೂ ನಿಮ್ಮ ಶಕ್ತಿಯೇ ನಿಮ್ಮ ಪಾಸಿಟಿವ್ ಮೈಂಡ್. ಅದನ್ನು ಚೆನ್ನಾಗಿಟ್ಟುಕೊಂಡರೆ ಸಾಕು. ಮಿಶ್ರಫಲವೂ ಅದೃಷ್ಟದ ಖಜಾನೆಯನ್ನೇ ತೆರೆಯಬಹುದು.



