ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ


ರುದ್ರಾಕ್ಷಿಯು ಧನಾತ್ಮಕ ಶಕ್ತಿಯನ್ನು ದೇಹಕ್ಕೆ ಸೇರಿಸುತ್ತದೆ ಹಾಗೂ ರುದ್ರಾಕ್ಷ ಧರಿಸುವುದ್ರಿಂದ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎನ್ನುವುದು ನಂಬಿಕೆ. ರುದ್ರಾಕ್ಷಿ ಧರಿಸುವುದ್ರಿಂದ ಶಿವನ ಕೃಪೆಗೆ ಪಾತ್ರರಾಗಬಹುದು ಎಂಬುದು ಶಿವಭಕ್ತರ ನಂಬಿಕೆ. ಶಿವನನ್ನು ಮೆಚ್ಚಿಸಲು ರುದ್ರಾಕ್ಷಿಯೊಂದಿಗೆ ಮಂತ್ರ ಪಠಿಣೆ ಮಾಡಬೇಕು. ಹೀಗೆ ಮಾಡಿದ್ರೆ ಶಿವ ಭಕ್ತರಿಗೆ ಬೇಗ ಒಲಿಯುತ್ತಾನೆ. ರುದ್ರಾಕ್ಷ ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ.
ರುದ್ರಾಕ್ಷವು ಏಕಮುಖಿಯಿಂದ ಹಿಡಿದು 21 ಮುಖಿಯವರೆಗೆ ಇರುತ್ತದೆ. ಒಂದೊಂದಕ್ಕೂ ತನ್ನದೇ ಆದ ಪ್ರತ್ಯೇಕ ಮಹತ್ವವಿದೆ. ಆದರೆ ಕೆಲವು ಸಂದರ್ಭಗಳಲ್ಲಿ ರುದ್ರಾಕ್ಷಿಯನ್ನು ಮರೆತು ಕೂಡ ಧರಿಸಬಾರದು. ಅಪ್ಪಿತಪ್ಪಿ ತಪ್ಪಾಗಿ ಧರಿಸಿದ್ರೆ ಫಲಿತಾಂಶ ಅಶುಭವಾಗಿರುತ್ತದೆ.
ಮಲಗುವಾಗ ದಯವಿಟ್ಟು ರುದ್ರಾಕ್ಷಿ ತೆಗೆದಿಡಿ. ಶಾಸ್ತ್ರದ ಪ್ರಕಾರ, ನೀವು ರುದ್ರಾಕ್ಷಿ ಧರಿಸಿದರೆ ಮಲಗುವಾಗ ತೆಗೆಯಬೇಕು. ರುದ್ರಾಕ್ಷಿಯನ್ನು ನಿಮ್ಮ ತಲೆಯ ಪಕ್ಕ ಅಥವಾ ಕೆಳಗೆ ಇಟ್ಟುಕೊಳ್ಳಬೇಕು. ಇದರಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ಕೆಟ್ಟ ಕನಸು ಗಳು ಬರುವುದಿಲ್ಲ.
ಸೂತಕದ ವೇಳೆಯಲ್ಲಿ ಬೇಡ ಎನ್ನುತ್ತಾರೆ. ಮಗುವಿನ ಜನನದ ಸಂದರ್ಭದಲ್ಲಿ ಮತ್ತು ಯಾರಾದರೂ ಸತ್ತಾಗ ಸಹ ರುದ್ರಾಕ್ಷವನ್ನು ಧರಿಸಬಾರದು ಎನ್ನುತ್ತಾರಾದರೂ ಪರಿಹಾರಗಳೂ ಇವೆ.
ಆದರೆ ಮಾಂಸ ತಿನ್ನುವಾಗ ಮತ್ತು ಮದ್ಯ ಸೇವಿಸುವಾಗ ಅಪ್ಪಿತಪ್ಪಿಯೂ ರುದ್ರಾಕ್ಷಿ ಧರಿಸಬೇಡಿ. ಮಾಂಸ ಮತ್ತು ಮದ್ಯ ಸೇವಿಸುವ ವ್ಯಕ್ತಿಗೆ ರುದ್ರಾಕ್ಷಿಯಿಂದ ಶುಭಕ್ಕಿಂತ ಅಶುಭಗಳೇ ಜಾಸ್ತಿ. ರುದ್ರಾಕ್ಷಿಯನ್ನು ಶಿವನ ಕಣ್ಣು ಎನ್ನುತ್ತಾರೆ. ಆ ಶಿವನ ಕಣ್ಣನ್ನು ಅಪವಿತ್ರ ಮಾಡಬೇಡಿ. ಇದಕ್ಕೆ ಪರಿಹಾರವೂ ಇಲ್ಲ. ಕೆಡುಕು ಅನುಭವಿಸುವುದಕ್ಕೆ ಸಿದ್ಧರಾಗಿದ್ದರೆ ಮಾತ್ರ ರುದ್ರಾಕ್ಷಿ ಧರಿಸಿ. ಅಂತಹ ಭಂಡ ಧೈರ್ಯವನ್ನು ಯಾರೂ ಮಾಡಲಾರರು.

ನೀವೇ ನೋಡಿರುವಂತೆ ರುದ್ರಾಕ್ಷಿ ಧರಿಸಿ ಅಪವಿತ್ರ ಕೆಲಸ ಮಾಡುವ ಯಾರೊಬ್ಬರೂ ನೆಮ್ಮದಿಯಾಗಿಲ್ಲ. ನೆಮ್ಮದಿಯಾಗಿರುವುದಿಲ್ಲ. ಅಕಸ್ಮಾತ್ ಉನ್ನತಿ ಸಿಕ್ಕರೂ ಅದಕ್ಕಿಂತ ಭಯಾನಕವಾಗಿ ಪತನವೂ ಇರುತ್ತದೆ. ಇನ್ನು ರುದ್ರಾಕ್ಷಿ ಧರಿಸುವವರು ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು ಎಂಬ ನಿಯಮಗಳಿವೆ.
ರುದ್ರಾಕ್ಷಿಯನ್ನು ಧರಿಸುವ ಮೊದಲು ಅದನ್ನು ಶಿವನಿಗೆ ಅರ್ಪಿಸಬೇಕು. ಶ್ರಾವಣ ಸೋಮವಾರ, ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ, ಸಂಕ್ರಾಂತಿ, ಅಮವಾಸ್ಯೆ, ಪೂರ್ಣಿಮಾ ಮತ್ತು ಮಹಾಶಿವರಾತ್ರಿಯ ದಿನಗಳಲ್ಲಿ ರುದ್ರಾಕ್ಷಿಯನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.



