ಚಾಣಕ್ಯ ನೀತಿಯಲ್ಲಿ ಅರ್ಥಶಾಸ್ತ್ರ, ರಾಜತಾಂತ್ರಿಕತೆ, ರಾಜಕೀಯವಲ್ಲದೆ ಸಾಮಾಜಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಚಾಣಕ್ಯ ಬ್ರಹ್ಮಚಾರಿಯಾಗಿದ್ದ. ಸಕಲ ವೇದ ಪಾರಂಗತನಾಗಿದ್ದ. ದಂಡಶಾಸ್ತ್ರ, ಅರ್ಥನೀತಿ, ರಾಜನೀತಿಗಳಲ್ಲಿ ನಿಪುಣನಾಗಿದ್ದ. ಕೇವಲ ತನ್ನ ಬುದ್ದಿಬಲದಿಂದ ನಂದರ ಸಾಮ್ರಾಜ್ಯವನ್ನು ನಾಶ ಮಾಡಿ, ಯುದ್ಧವನ್ನೇ ಮಾಡದೆ ರಾಜತಂತ್ರಗಳಿಂದಲೇ ಚಂದ್ರಗುಪ್ತ ಮೌರ್ಯನನ್ನು ಆರ್ಯಾವರ್ತದ ಚಕ್ರವರ್ತಿಯನ್ನಾಗಿ ಮಾಡಿದ.
ಚಾಣಕ್ಯ ನೀತಿಯಲ್ಲಿ ಮನುಷ್ಯ ಯಶಸ್ವಿಯಾಗಲು ಏನು ಮಾಡಬೇಕು, ಸ್ನೇಹಿತರು ಹೇಗಿರಬೇಕು, ಹೆಣ್ಣು ಹೇಗಿರಬೇಕು, ಗೃಹಿಣಿ ಹೇಗಿರಬೇಕು, ರಾಜನಾದವನು ಹೇಗೆ ನಡೆದುಕೊಳ್ಳಬೇಕು, ಮಂತ್ರಿಯಾದವನು ಏನು ಮಾಡಬೇಕು, ಸೇನೆಯಅಧ್ಯಕ್ಷನಾದವನ ಹೊಣೆಗಾರಿಕೆ ಏನು, ಅಧ್ಯಾಪಕರ ವೃತ್ತಿಯೇನು.. ಹೇಗಿರಬೇಕು.. ಹೀಗೆ ಪ್ರತಿಯೊಂದನ್ನೂ ಹೇಳಿದ್ದಾನೆ.
ಚಾಣಕ್ಯ ಮಹಿಳೆ ಹಾಗೂ ಪುರುಷರ ಬಗ್ಗೆಯೂ ಅನೇಕ ಸಂಗತಿಗಳನ್ನು ಹೇಳಿದ್ದಾನೆ. ಚಾಣಕ್ಯ ಎಂಥ ಮಹಿಳೆಯರನ್ನು ನಂಬಬೇಕು, ಎಂಥ ಮಹಿಳೆಯರನ್ನು ನಂಬಬಾರದು ಎಂಬುದನ್ನು ಕೂಡ ಹೇಳಿದ್ದು, ಚಾಣಕ್ಯ ನೀತಿಯಲ್ಲಿ ಮನುಷ್ಯನ ಯಶಸ್ಸಿಗೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಮಹಿಳೆಯರನ್ನು ಹೇಗೇ ಗೌರವಿಸಬೇಕೆಂದೂ ಹೇಳಿದ್ದಾನೆ ಚಾಣಕ್ಯ.ಹೀಗೆ ಹೇಳುವಾಗಲೇ ಮಹಿಳೆಯರು ಕೆಲ ಕೆಲಸಗಳನ್ನು ಮಾಡುವಾಗ ಪುರುಷರು ನೋಡಬಾರದು ಎಂದು ಹೇಳಿದ್ದಾನೆ.
ಊಟ ಮಾಡುವಾಗ: ಊಟ ಮಾಡುವುದನ್ನು ಬೇರೆಯವರು ನೋಡ್ತಿದ್ದರೆ ಸರಿಯಾಗಿ ಊಟ ಸೇರುವುದಿಲ್ಲ.. ಚಾಣಕ್ಯನ ಪ್ರಕಾರ, ಮಹಿಳೆ ಊಟ ಮಾಡುವಾಗ ಕುಟುಂಬ ಸದಸ್ಯನ್ಲದ ಪುರುಷನು ಅವಳನ್ನು ನೋಡಬಾರದು. ಇದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಮಹಿಳೆ ಊಟ ಮಾಡುವಾಗ ಪುರುಷ ನೋಡಿದ್ರೆ ಇದು ಮಹಿಳೆಯ ಮುಜುಗರಕ್ಕೆ ಕಾರಣವಾಗುತ್ತದೆ. ಇದ್ರಿಂದ ಮಹಿಳೆಗೆ ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ.
ಸೀನು ಆಕಳಿಕೆ : ಬರೀ ಊಟ ಮಾತ್ರವಲ್ಲ ಮಹಿಳೆ ಸೀನುತ್ತಿದ್ದರೆ ಆಗ ಕೂಡ ಪುರುಷ ಆಕೆಯನ್ನು ನೋಡಬಾರದಂತೆ. ಅಂತಹ ಸಂದರ್ಭದಲ್ಲಿ ದೇಹದ ಮೇಲಿನ ಉಡುಪುಗಳು ತಂತಾನೇ ಅಸ್ತವ್ಯಸ್ತಗೊಳ್ಳುತ್ತದೆ. ಅದು ಸಭ್ಯತೆ ಅಲ್ಲ.
ಬಟ್ಟೆ ಸರಿಪಡಿಸುವಾಗ : ಸ್ವತಃ ಗಂಡನಿಗೂ ನಿರ್ಬಂಧಗಳಿವೆ. ಹೆಣ್ಣು ಬಟ್ಟೆ ಧರಿಸುವುದೇ ಮರ್ಯಾದೆ ಮುಚ್ಚಿಕೊಳ್ಳೋಕೆ. ಹೀಗಿರುವಾಗ ಮಹಿಳೆ ತನ್ನ ಬಟ್ಟೆಗಳನ್ನು ಸರಿಪಡಿಸುತ್ತಿದ್ದರುವಾಗ್ಲೇ ಪುರುಷ ಅವಳನ್ನು ನೋಡಿದರೆ ಆಕೆಗೆ ಮತ್ತಷ್ಟು ಮುಜುಗರವಾಗುತ್ತದೆ. ಮಹಿಳೆ ಬಟ್ಟೆ ಸರಿ ಮಾಡಿಕೊಳ್ಳುವಾಗ ನೋಡುವುದು ತಪ್ಪು. ಮಹಿಳೆ ಬಟ್ಟೆ ಸರಿ ಮಾಡಿಕೊಳ್ತಿದ್ದಾಳೆ ಎಂಬುದು ಗೊತ್ತಾದ್ರೆ ಪುರುಷ ಎಚ್ಚೆತ್ತುಕೊಳ್ಳಬೇಕು. ಆಕೆಯನ್ನು ಅಪ್ಪಿತಪ್ಪಿಯೂ ನೋಡಬಾರದು. ಆಕೆಗೆ ಗೌರವ ನೀಡಿ, ಅಲ್ಲಿಂದ ಹೋಗಬೇಕು ಎನ್ನುತ್ತಾರೆ ಚಾಣಕ್ಯ. ಮೀರಿದವರಿಗೆ ಶಿಕ್ಷೆ ವಿಧಿಸುವ ಹಕ್ಕು ಮಹಿಳೆಗೆ ಇದೆ.
ಮಸಾಜ್ : ಚಾಣಕ್ಯ ನೀತಿ ಪ್ರಕಾರ, ಮಹಿಳೆ ಎಣ್ಣೆಯಿಂದ ತನ್ನ ದೇಹವನ್ನು ಮಸಾಜ್ ಮಾಡಿಕೊಳ್ತಿದ್ದರೆ ಪುರುಷನಾದವನು ಆಕೆಯನ್ನು ನೋಡಬಾರದು. ಇದು ಆಕೆ ಗೌರವಕ್ಕೆ ಧಕ್ಕೆ ತರುತ್ತದೆ. ಪುರುಷರ ಮರ್ಯಾದೆಗೂ ಅದು ತಕ್ಕುದಲ್ಲ.
ಮಗುವಿಗೆ ಹಾಲುಣಿಸುವಾಗ : ಸ್ತನ್ಯಪಾನ ಪುಣ್ಯದ ಕೆಲಸ. ಮಹಿಳೆ ತನ್ನ ಮಗುವಿಗೆ ಹಾಲುಣಿಸುವುದನ್ನು ಯಾವುದೇ ಪುರುಷ ನೋಡಬಾರದು. ಪುರುಷ ನೋಡಿದಾಗ ಆಕೆ ವಿಚಲಿತಳಾಗ್ತಾಳೆ. ಇದ್ರಿಂದ ಹಾಲು ಕುಡಿಯುತ್ತಿರುವ ಮಗುವಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಚಾಣಕ್ಯ.ಇದೂ ಕೂಡಾ ಅಪರಾಧ ಎಂದೇ ಪರಿಗಣಿಸುತ್ತಾನೆ ಚಾಣಕ್ಯ.
ಅಲಂಕಾರ ಮಾಡಿಕೊಳ್ಳುವಾಗ : ಮಹಿಳೆ ತನ್ನ ಕಣ್ಣುಗಳಿಗೆ ಕಾಜಲ್ ಹಚ್ಚುವಾಗ ಅಥವಾ ಮೇಕ್ಅಪ್ ಮಾಡಿಕೊಳ್ಳುವಾಗ ಪುರುಷನು ಅವಳನ್ನು ನೋಡಬಾರದು. ಪುರುಷ ಈ ಸಮಯದಲ್ಲಿ ಮಹಿಳೆಯನ್ನು ನೋಡಿದ್ರೆ ಅವಳ ಗಮನ ಬೇರೆಡೆಗೆ ಹೋಗುತ್ತದೆ. ಈ ಸಮಯದಲ್ಲಿ ಪುರುಷ ಅಲ್ಲಿಂದ ದೂರ ಹೋದರೆ ಒಳ್ಳೆಯದು ಎನ್ನುತ್ತಾರೆ ಚಾಣಕ್ಯ.
ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ನಿರ್ಬಂಧಗಳಿವೆ. ಗಂಡು ಮಕ್ಕಳಿಗೆ ಹೋಲಿಸಿದರೆ ಹೆಣ್ಣಿಗೆ ಸ್ವಾತಂತ್ರ್ಯ ಕಡಿಮೆ. ಆದರೆ ಅದು ಗಂಡಸರ ಸ್ವೇಚ್ಛೆಗೆ ಅವಕಾಶ ಮಾಡಿಕೊಡುವುದಿಲ್ಲ. ಕೊಡಬಾರದು. ಇದು ಸಮಾಜದ ನೀತಿಯಷ್ಟೇ ಅಲ್ಲ, ಇದನ್ನು ರಾಜಧರ್ಮದಲ್ಲೂ ಸೇರಿಸಿರುವ ಚಾಣಕ್ಯ, ದೇಶವನ್ನಾಳುವವನ ಹೊಣೆ ಹೆಂಗಸರಿಗೆ ರಕ್ಷಣೆ ನೀಡುವುದು ಎಂದಿದ್ದಾನೆ.



