ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೈಗಳ ರೇಖೆಗಳ ಬಗ್ಗೆ ಅಷ್ಟೇ ಇರುವುದಿಲ್ಲ. ಕೈಯಲ್ಲಿ ಇರುವ ಗುರುತು, ಚಿಹ್ನೆಗಳ ಬಗ್ಗೆಯೂ ಲಾಭ ನಷ್ಟ ಗುಣ ದೋಷಗಳನ್ನು ತಿಳಿದುಕೊಳ್ಳಬಹುದು. ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ಕಂಡುಹಿಡಿಯಬಹುದು. ವೈಯಕ್ತಿಕ ಜೀವನ, ವೃತ್ತಿ ಜೀವನ, ಪ್ರೇಮ ಜೀವನ, ಧನಧಾನ್ಯ ಲಕ್ಷ್ಮಿಯರ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅವುಗಳೆಂದರೆ..

ಹಸ್ತದಲ್ಲಿ ಮೀನು : ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈಯಲ್ಲಿ ಮೀನಿನ ಗುರುತು ಇದ್ದವರು ವಿದೇಶ ವಾಸಿ. ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಭವಿಷ್ಯದಲ್ಲಿ, ಸಾಗರಾದೆಚೆಗಿನ ದೇಶಗಳಿಗೆ ಪ್ರವಾಸ ಮಾಡುತ್ತಾರೆ. ಹಣದ ಕೊರತೆಯಿರುವುದಿಲ್ಲ. ಈ ಜನರು ಸಂತೋಷದ ಜೀವನವನ್ನು ನಡೆಸುತ್ತಾರೆ.






ಹಸ್ತದಲ್ಲಿ ದೋಣಿ : ವ್ಯಕ್ತಿಯ ಕೈಯಲ್ಲಿ ದೋಣಿಯ ಗುರುತು ಇದ್ದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಅಲ್ಲದೆ, ಅವರಿಗೆ ಹಣ ಮತ್ತು ಆಹಾರದ ಕೊರತೆಯಿಲ್ಲ. ಅಂತಹ ಜನರು ಸಮುದ್ರದ ಆಚೆಗಿನ ದೇಶಗಳಲ್ಲಿ ಉತ್ತಮ ವ್ಯಾಪಾರ ವ್ಯವಹಾರವನ್ನು ಹೊಂದಿರುತ್ತಾರೆ.

ಹಸ್ತದಲ್ಲಿ ಪಲ್ಲಕ್ಕಿ : ಕೈಯಲ್ಲಿ ಪಲ್ಲಕ್ಕಿಯ ಗುರುತನ್ನು ಹೊಂದಿದ್ದರೆ, ಅವರನ್ನು ಜನ ತುಂಬಾ ಅದೃಷ್ಟವಂತರು ಎಂದು ಪರಿಗಣಿಸುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂತಹ ಜನ ಐಷಾರಾಮಿ ಜೀವನ ನಡೆಸುತ್ತಾರೆ. ಜೀವನದಲ್ಲಿ ಭೌತಿಕ ಸೌಕರ್ಯಗಳಿಗೆ ಕೊರತೆಯಿರುವುದಿಲ್ಲ. ಅಂಥವರ ಬಳಿ ಅಪಾರ ಸಂಪತ್ತು ಇರುತ್ತದೆ. ಸೇವಕರು ಮತ್ತು ಕಾರುಗಳನ್ನು ಹೊಂದಿದ್ದಾರೆ. ಉನ್ನತ ಸ್ಥಾನ ಗೌರವ ಹೊಂದುತ್ತಾರೆ.





