ಒಬ್ಬ ವ್ಯಕ್ತಿಯ ಭವಿಷ್ಯ ನಿರ್ಧರಿಸೋದು ಜನ್ಮ ನಕ್ಷತ್ರ, ತಿಥಿ, ಗ್ರಹಗಳ ಚಲನೆ ಮತ್ತಿತರ ಅಂಶಗಳು. ಅದೇ ರೀತಿ ನಿಮ್ಮ ಹುಟ್ಟಿದ ದಿನ ಅಂದರೆ ವಾರವೂ ಅಷ್ಟೇ ಮುಖ್ಯ. ಅದರ ಪರಿಣಾಮ ಒಳ್ಳೆಯದೋ.. ಕೆಟ್ಟದ್ದೋ.. ಪ್ರಭಾವವನ್ನಂತೂ ಬೀರುತ್ತೆ. ಇದು ಶನಿವಾರ ಜನಿಸಿದವರ ಕಥೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ದಿನವೂ ಒಂದೊಂದು ಗ್ರಹದೊಂದಿಗೆ ಸಂಬಂಧಿಸಿದೆ. ಆ ಗ್ರಹಗಳು ವ್ಯಕ್ತಿತ್ವ ಮತ್ತು ಜೀವನ ಶೈಲಿಯ ಮೇಲೆ ಪ್ರಭಾವ ಬೀರುತ್ತವೆ.
ಶುಕ್ರವಾರ ಜನಿಸಿದ ಜನ ಸಖತ್ ರೊಮ್ಯಾಂಟಿಕ್. ತಲೆಯೂ ದೊಡ್ಡದು. ಕಣ್ಣುಗಳೂ ದೊಡ್ಡದು. ಗುಂಗುರು ಕೂದಲು ಇರುವ ಸಾಧ್ಯತೆ ಹೆಚ್ಚು. ಕೈಗಳೂ ದೊಡ್ಡವು. ಕೊಡುವ ಕೈಗಳೂ ದೊಡ್ಡವೇ. ಶುಕ್ರವಾರ ಹುಟ್ಟುವ ಮಕ್ಕಳ ಸಂಖ್ಯೆ ಸಾಮಾನ್ಯವಾಗಿ ಕಡಿಮೆ. ಕೊರತೆಯೇ ಇಲ್ಲ ಎನ್ನುವಂತೆ ಬದುಕುತ್ತಾರೆ. ಕಪ್ಪೇ ಇರಲಿ, ಬಿಳುಪೇ ಇರಲಿ.. ಮೈಬಣ್ಣ ಆಕರ್ಷಕವಾಗಿರುತ್ತೆ. ಬುದ್ದಿವಂತಿಕೆಯಲ್ಲಂತೂ ಇವರಿಗೆ ಇವರೇ ಸಾಟಿ. ಅದೃಷ್ಟ ಸಂಖ್ಯೆ 6. ಹವಾಮಾನ ಬದಲಾವಣೆಗೆ ಬೇಗ ಗುರಿಯತ್ತಾರೆ. ಗುಲಾಬಿ, ಕೆಂಪು ಮತ್ತು ಕಿತ್ತಳೆ ಶುಕ್ರವಾರ ಜನಿಸಿದವರಿಗೆ ಶುಭ ಸೂಚಕ ಬಣ್ಣಗಳು.
ಶುಕ್ರವಾರ ಜನಿಸಿದವರು ನೋಡೋಕೆ ಸ್ಮಾರ್ಟ್ ಆಗಿರ್ತಾರೆ. ಕಣ್ಣ ನೋಟದಲ್ಲೇ ಕೊಲ್ಲುವಂತಾ ಚಾರ್ಮ್ ಇರುತ್ತೆ. ಹಾಸ್ಯ, ನಗು ಇವರ ಚಿತ್ತ ಗುಣ. ಡ್ರೆಸ್ಸಿನ ಬಗ್ಗೆ ಪಕ್ಕಾ ಐಡಿಯಾ ಇಟ್ಟುಕೊಂಡಿರುತ್ತಾರೆ. ಕೊಳಕು ಬಟ್ಟೆ ತೊಡುವುದೇ ಇಲ್ಲ. ಫ್ಯಾಶನ್ ಪ್ರಿಯರು ಡ್ಯಾನ್ಸು, ಹಾಡು, ತಿನ್ನೋದು ಕುಡಿಯೋದು ಇವರ ಮೈಗಂಟಿಕೊಂಡೇ ಇರುತ್ತೆ. ದುಡ್ಡು ಖರ್ಚು ಮಾಡೋಕೆ ಹಿಂದೆ ಮುಂದೆ ನೋಡಲ್ಲ. ಲಕ್ಷುರಿ ಲೈಫ್ ಇಷ್ಟಪಡ್ತಾರೆ. ಅದಕ್ಕಾಗಿಯೇ ಪ್ರಾಬ್ಲಂ ಎದುರಿಸ್ತಾರೆ.
ಕಲೆ ಮತ್ತು ಮನರಂಜನಾ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಹೊಂದುವ ಶಕ್ತಿ ಇದೆ. ಹೆಸರು, ಖ್ಯಾತಿಗಾಗಿ ಹಂಬಲಿಸೋ ವ್ಯಕ್ತಿತ್ವದವರು. ಅದಕ್ಕಾಗಿ ಶ್ರಮವನ್ನೂ ಪಡ್ತಾರೆ. ಸದಾ ಪಾಸಿಟಿವ್ ಆಗಿಯೇ ಯೋಚಿಸ್ತಾರೆ. ಕೆಲಸದಲ್ಲಿ ಗೆಲ್ಲೋಕೆ, ಕಂಪ್ಲೀಟ್ ಮಾಡೋಕೆ ಕ್ರಿಯೇಟಿವ್ ಆಗಿ ಯೋಚನೆ ಮಾಡ್ತಾರೆ. ಮಾತು ಇವರ ಮನೆ ಆಸ್ತಿ. ಎಂತಹವರನ್ನೂ ಮಾತಿನಲ್ಲಿಯೇ ಮೋಡಿ ಮಾಡುವ ಕಲೆ ಇವರಿಗೆ ಸಿದ್ಧಿಯಾಗಿರುತ್ತೆ.
ಲವ್ ಲೈಫು ಬೊಂಬಾಟೋ ಬೊಂಬಾಟು
ಶುಕ್ರವಾರ ಜನಿಸಿದವರು ಸಂಬಂಧಗಳನ್ನು ಜತನದಿಂದ ಕಾಪಾಡಿಕೊಳ್ತಾರೆ. ಸೊಗಸುಗಾರ ಪುಟ್ಟಸ್ವಾಮಿ. ಫ್ರೆಂಡ್ ಸರ್ಕಲ್ ದೊಡ್ಡದು. ಇವರ ಸ್ನೇಹ ಬಳಗಕ್ಕೆ ಬಂದವರು ದೂರವಾಗೋ ಮಾತೇ ಇಲ್ಲ. ಕುಟುಂಬದ ಜೊತೆ ಅನ್ಯೋನ್ಯವಾಗಿರ್ತಾರೆ. ಶುಕ್ರ ಗ್ರಹದ ಆಶೀರ್ವಾದದ ಪ್ರಭಾವ. ಪ್ರೇಮ ದೇವತೆ ಇವರ ಸುತ್ತ ನಾಟ್ಯ ಮಾಡ್ತಾ ಇರ್ತಾಳೆ. ಸಖತ್ ರೊಮ್ಯಾಂಟಿಕ್. ಸಂಗಾತಿಯನ್ನೂ ರೊಮ್ಯಾಂಟಿಕ್ ಆಗಿ ನೋಡಿಕೊಳ್ತಾರೆ. ಅರ್ಜುನನ ವಂಶದವರು ಎನ್ನಬಹುದು.
ಅಕಸ್ಮಾತ್ ಲವ್ ಫೇಲ್ಯೂರ್ ಆದರೆ ನೋವಿಗೆ ಬೀಳ್ತಾರೆ. ಬೇಗ ಅದರಿಂದ ಹೊರಬರೋದು ಇವರಿಗೆ ಕಷ್ಟ. ಭಾವನಾತ್ಮಕ ಜೀವಿಗಳು. ಪ್ರೀತಿ ರಕ್ಷಿಸಿಕೊಳ್ಳೋಕೆ ಇವರು ಎಂತಹ ಸಾಹಸಕ್ಕಾದರೂ ಕೈ ಹಾಕ್ತಾರೆ. ಇಷ್ಟೆಲ್ಲ ಆಗಿಯೂ ಶೃಂಗಾರ ಪ್ರಿಯರು. ಕಿಟಕಿ ಇಣುಕುವ ಪ್ರವೃತ್ತಿ ಹೆಚ್ಚು.ಆದರೆ, ಪ್ರೇಮಕ್ಕೆ ಶರಣಾಗೋ ಸ್ವಭಾವ. ಸುಂದರ ಪ್ರೀತಿಯಿದ್ದರೆ ಇವರು ಆ ಪ್ರೀತಿಗೆ, ಸಂಬಂಧಕ್ಕೆ ಇವರು ಅಷ್ಟೇ ನಿಷ್ಟರೂ ಹೌದು.
ಆರೋಗ್ಯ ಇವರ ಸ್ವತ್ತು. ಸದೃಡರು. ಆದರೂ ಇವರಿಗೆ ದೂಳು, ಕೊಳಕು ಅಂದ್ರೆ ಆಗಲ್ಲ. ಝಂಕ್ ಫುಡ್ ಇಷ್ಟ. ಹೀಗಾಗಿ ಆಗಾಗ್ಗೆ ಇವರ ಹೊಟ್ಟೆ ರೋಗದ ರಾಗ ಹಾಡುತ್ತಲೇ ಇರುತ್ತೆ. ಗ್ಯಾಸ್ಟ್ರಿಕ್ಟ್ ಇವರ ಮನೆದೇವ್ರು.ದುಡ್ಡು ಗಳಿಸ್ತಾರೆ. ಕಳೀತಾರೆ. ವೈವಾಹಿಕ ಜೀವನದಲ್ಲಿ ಹ್ಯಾಪಿ ಹ್ಯಾಪಿ. ತಮ್ಮದೇ ಮಕ್ಕಳಿಗಿಂತ ಹೆಚ್ಚು ಹೆಂಡತಿಯನ್ನು ಪ್ರೀತಿಸುವವರು.
ಲಕ್ಷ್ಮಿ ಮತ್ತು ದುರ್ಗೆಯನ್ನು ಪೂಜಿಸಬೇಕು. ಖರ್ಚುಗಳನ್ನು ನಿಯಂತ್ರಿಸದೇ ಹೋದರೆ ಬದುಕು ಸತ್ಯ ಹರಿಶ್ಚಂದ್ರನ ಕಥೆಯಾದೀತು. ಶುಕ್ರವಾರದಂದು ಶಿವನಿಗೆ ಪೂಜೆ ಮಾಡುವುದು ಮಂಗಳಕರ.



