ನಾವೂ ನೀವೂ ಎಲ್ಲಾ ಸಂಭ್ರಮದಿಂದ ಆಚರಿಸೋಕೆ ಕಾಯ್ತಾ ಇರೋ ದೀಪಾವಳಿಗೆ ಮುನ್ನ ಗ್ರಹಣಕ್ಕೆ ಸಿದ್ಧರಾಗಿ. ಅಶ್ವಯುಜ ಮಾಸದ ತ್ರಯೋದಶಿನಾ ಧನತ್ರಯೋದಶಿ ಅಂತ ಹಬ್ಬ ಮಾಡೋ ಹೊತ್ತಲ್ಲಿ ಅಮಾವಾಸ್ಯೆ ಬರುತ್ತಿದೆ. ಲಕ್ಷ್ಮೀ ಪೂಜೆಯ ದಿನವೇ. ಕಾರ್ತೀಕ ಮಾಸ ಶುರುವಾಗುವುದೇ ಗ್ರಹಣದಿಂದ.

25 ಅಕ್ಟೋಬರ್ 2022.. ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಇದೇ 25ನೇ ತಾರೀಖು, ಲಕ್ಷ್ಮೀ ದೇವಿಯ ಪೂಜೆಯೂ ಇದೆ. ಅಕ್ಟೋಬರ್ 25ರಂದು ಸೂರ್ಯಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2:28. ಸಂಜೆ 4:30ರ ವೇಳೆಗೆ ಗ್ರಹಣದ ಮಧ್ಯ ಕಾಲ. ಗ್ರಹಣ ಮೋಕ್ಷ ಕಾಲ ಸಂಜೆ 6:32ಕ್ಕೆ ಇದೆ. ಭಾರತದಲ್ಲೂ ಕಾಣಿಸಿಕೊಳ್ಳಲಿರೋ ಈ ಗ್ರಹಣ ಯುರೋಪ್, ಆಫ್ರಿಕಾ ಖಂಡದ ಈಶಾನ್ಯ ಭಾಗ, ಏಷ್ಯಾದ ನೈಋತ್ಯ ಭಾಗ ಮತ್ತು ಅಟ್ಲಾಂಟಿಕ್ ಪ್ರದೇಶಗಳಲ್ಲೂ ಗೋಚರಿಸಲಿದೆ..
1995ರಲ್ಲಿ, ಅಂದ್ರೆ ಸರಿಯಾಗಿ 27 ವರ್ಷಗಳ ಹಿಂದೆ ದೀಪಾವಳಿ ಅಮಾವಾಸ್ಯೆಯಂದೇ ಗ್ರಹಣ ಸಂಭವಿಸಿತ್ತು. ಈಗ ಮತ್ತೊಮ್ಮೆ ಆಗುತ್ತಿದೆ. ಗ್ರಹಣದ ಮೋಕ್ಷ ಕಾಲದ ಹೊತ್ತಿಗೆ ಭಾರತದ ಬಹುತೇಕ ಭಾಗಗಳಲ್ಲಿ ಸೂರ್ಯಾಸ್ತವಾಗಿರುತ್ತೆ.
ಬೆಂಗಳೂರಿನಲ್ಲಿ ಅ. 25ರ ಸಂಜೆ 5.12ಯಿಂದ ಗ್ರಹಣ ಆರಂಭವಾಗಲಿದ್ದು, ಸಂಜೆ 5.49ಕ್ಕೆ ಗರಿಷ್ಠ ಮಟ್ಟವನ್ನು ತಲುಪಲಿದೆ. 5.55ರ ವೇಳೆಗೆ ಮುಕ್ತಾಯವಾಗಲಿದೆ. ಇದು 2022ನೇ ವರ್ಷದ ಕೊನೆಯ ಸೂರ್ಯ ಗ್ರಹಣವಾಗಿದೆ. ಮುಂದಿನ 2 ವರ್ಷಗಳ ಕಾಲ ಬೇರೆ ಯಾವುದೇ ಗ್ರಹಣವೂ ಗೋಚರಿಸುವುದಿಲ್ಲ.




