ತಂದೆಯೋ.. ತಾಯಿಯೋ.. ಬಂಧುವೋ.. ಗೆಳೆಯರೋ ಸತ್ತಿರುತ್ತಾರೆ. ಆದರೆ.. ಆಗಾಗ್ಗೆ ಕನಸಿನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರೊಂದಿಗೆ ನೀವು ಮಾತನಾಡುತ್ತೀರಿ. ನಗುತ್ತೀರಿ. ಆಟವಾಡುತ್ತೀರಿ. ಊಟ ಮಾಡುತ್ತೀರಿ. ಎಲ್ಲವೂ ಕನಸಿನಲ್ಲೇ. ಒಮ್ಮೊಮ್ಮೆ ಇದೆಂಥ ಕೆಟ್ಟ ಕನಸು ಅನಿಸುವುದೂ ಉಂಟು. ಎಷ್ಟೋ ಬಾರಿ ಕನಸಿನಿಂದಲೇ ನಗು, ಸುಖ, ಶಾಂತಿ, ನೆಮ್ಮದಿ ದೊರಕುವುದೂ ಉಂಟು. ಜ್ಯೋತಿಷಿಗಳು ಹೇಳೋದೇ ಬೇರೆ. ಜ್ಯೋತಿಷ್ಯವನ್ನು ಕರಾರುವಾಕ್ಕಾಗಿ ಅಧ್ಯಯನ ಮಾಡಿದವರು, ಶಾಸ್ತ್ರೋಕ್ತವಾಗಿ ತಿಳಿದುಕೊಂಡವರು ನಿಮ್ಮ ಕನಸಿನ ವಿವರಣೆ ತಿಳಿದುಕೊಂಡು ಸೂಕ್ತ ಮಾರ್ಗದರ್ಶನ ನೀಡುತ್ತಾರೆಯೇ ಹೊರತು, ಹೆದರಿಸುವುದಿಲ್ಲ. ಭಯಪಡಿಸುವುದಿಲ್ಲ. ಏಕೆಂದರೆ ಕನಸುಗಳು ಆತಂಕದ ಸುಳಿವುಗಳೇ ಹೊರತು, ಆಪತ್ತಿನ ಸುಳಿವುಗಳಲ್ಲ. ಆತಂಕಕ್ಕೂ.. ಅಪಾಯಕ್ಕೂ ವ್ಯತ್ಯಾಸವಿದೆ ಎಂಬುದು ಗಮನದಲ್ಲಿರಲಿ. ಇಷ್ಟಕ್ಕೂ ಯಾವ್ಯಾವ ರೀತಿಯ ಕನಸುಗಳು, ವ್ಯಕ್ತಿಗಳು, ಯಾವ್ಯಾವ ರೀತಿ ಕನಸಿನಲ್ಲಿ ಬಂದರೆ ಏನೇನು ಸೂಚನೆ ಎನ್ನುವುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಸತ್ತಿರುವ ತಂದೆ ತಾಯಿ ಕನಸಲ್ಲಿ ಬಂದರೆ ಒಳ್ಳೆಯದಾಗುತ್ತದೆ. ನೀವು ಹೆಚ್ಚು ಕಾಲ ಬದುಕುತ್ತೀರಿ. ಕನಸಿನಲ್ಲಿ ಸಿಗುವ ಆಶೀರ್ವಾದವೂ ಶುಭ ಸೂಚಕವೇ.
ಆದರೆ ಅವರು ಅಳುವ ರೀತಿಯಲ್ಲಿ ಕಾಣಿಸಬಾರದು. ಅದು ನೀವ್ಯಾವುದೋ ತಪ್ಪು ಮಾಡಿದ್ದೀರಿ ಎಂಬುದರ ಸೂಚನೆ. ಅದು ಅವರಿಗಾದರೂ ಆಗಿರಬಹುದು ಅಥವಾ ಈಗ ಬದುಕಿರುವ ಇನ್ಯಾರಿಗೋ ಆಗಿರಬಹುದು. ತಪ್ಪು ಯಾವುದು ಎನ್ನುವುದನ್ನು ನೀವೇ ಹುಡುಕಬೇಕು. ಧರ್ಮ ಕಾರ್ಯ ಮಾಡಬೇಕು.


ಸತ್ತವರು ನಿಮ್ಮ ಮನೆಯಲ್ಲಿ ಮಲಗಿದಂತೆ ಕನಸು ಬಿದ್ದರೆ ದೊಡ್ಡ ಆಪತ್ತಿನಿಂದ ಬಚಾವ್ ಆಗುತ್ತಿದ್ದೀರಿ ಎಂದರ್ಥ. ಅಪಾಯದಸಮಯ ಹತ್ತಿರದಲ್ಲಿದೆ, ಹುಷಾರ್ ಎಂಬ ಸೂಚನೆಯೂ ಇರಬಹುದು.
ಶವಪೆಟ್ಟಿಗೆಯ ಕನಸು, ಶವದ ಮೆರವಣಿಗೆಯ ಕನಸು ಬಂದರೆ ಹತ್ತಿರದಲ್ಲೇ ಇನ್ಯಾವುದೋ ಸಾವು ಇಣುಕಿ ನೋಡುತ್ತಿದೆ ಎಂದರ್ಥ.
ಮೃತ ತಂದೆ ಕನಸಿನಲ್ಲಿ ಮಾತನಾಡಿಸಿದರೆ ನೀವು ಯಾವುದೋ ಗೊಂದಲದಲ್ಲಿದ್ದೀರಿ, ಬಿಡಿಸಲಾಗದ ಕಷ್ಟದಲ್ಲಿದ್ದೀರಿ ಎಂಬ ಸೂಚನೆ ಕೊಡುತ್ತಿರುತ್ತದೆ. ಇದು ಸೈಕಾಲಜಿಯೇ ಹೊರತು ಜ್ಯೋತಿಷ್ಯವಲ್ಲ. ಮೃತ ತಾಯಿ ಕನಸಿನಲ್ಲಿ ಬರುವುದಕ್ಕೆ ಕಾರಣ ಬೇಕಿಲ್ಲ. ಆದರೆ ತಂದೆ ತಾಯಿ ಕನಸಿನಲ್ಲಿ ಬಂದರೆ ಅವರು ಯಾವುದನ್ನೋ ಎಚ್ಚರಿಕೆ ನೀಡಲು ಬಂದಿರುತ್ತಾರೆ ಎಂದು ಭಾವಿಸಿ.
ಸತ್ತವರು ಕನಸಿನಲ್ಲಿ ಏನನ್ನೋ ನೀಡುತ್ತಿರುವಂತೆ ಕಂಡರೆ ನಿಮಗೆ ಈಗ ಯಾರದ್ದೋ ಸಹಾಯ ಬೇಕಾಗಿದೆ ಅಥವಾ ನೀವು ಸಹಾಯವನ್ನು ನಿರೀಕ್ಷಿಸುತ್ತಿದ್ದೀರಿ ಎಂಬ ಸೂಚನೆ ಕೊಡುತ್ತಿರುತ್ತದೆ. ಸತ್ತ ವ್ಯಕ್ತಿಗಳೊಂದಿಗೆ ನಗುತ್ತಿರುವ ಕನಸು ಬಿದ್ದರೆ ನಿಮ್ಮ ಮನಸ್ಸು ಇನ್ಯಾವುದೋ ಶುಭ ಸಂಕೇತ, ಶುಭಫಲಕ್ಕೆ ಎದುರು ನೋಡುತ್ತಿದೆ ಎಂದರ್ಥ.
ಸತ್ತಿರುವ ವ್ಯಕ್ತಿಗಳು ನಿಮ್ಮ ಕನಸಿನಲ್ಲಿ ಸತ್ತೇ ಇಲ್ಲವೇನೋ ಎಂಬಂತೆ ಪದೇ ಪದೇ ಕಾಣುತ್ತಿದ್ದರೆ ಅವರ ಜೊತೆ ನಿಮ್ಮ ಬಾಂಧವ್ಯ ಮುಗಿದಿಲ್ಲ ಎಂಬ ಸೂಚನೆ. ಕನಸಿನಲ್ಲಿ, ಸತ್ತ ವ್ಯಕ್ತಿಯನ್ನು ಸಂತೋಷದಿಂದ ನೋಡುವುದು ನಿಮಗಾಗಿ ಹೋರಾಟದ ಅಂತ್ಯವನ್ನು ಸಂಕೇತಿಸುತ್ತದೆ. ನೀವು ಶೀಘ್ರದಲ್ಲೇ ಹಿಂದಿನ ನೋವುಗಳು ಮತ್ತು ಚಿಂತೆಗಳನ್ನು ಬಿಡಲು ಸಾಧ್ಯವಾಗುತ್ತದೆ.

ಸತ್ತ ವ್ಯಕ್ತಿಯು ಮತ್ತೆ ಸಾಯುವ ಕನಸು ಒಂದು ಗೊಂದಲದ ಕನಸಾಗಿರಬಹುದು, ಅದು ಆ ವ್ಯಕ್ತಿಯ ಸಾವನ್ನು ತಡೆಯಲು ನೀವು ಏನಾದರೂ ಮಾಡಬಹುದೇ ಎಂದು ನೀವು ಆಶ್ಚರ್ಯಪಡುತ್ತೀರಿ. ಸತ್ತ ವ್ಯಕ್ತಿಯನ್ನು ತಬ್ಬಿಕೊಳ್ಳುವ ಕನಸು ಕಂಡಾಗ, ನೀವು ಪಶ್ಚಾತ್ತಾಪ ಮತ್ತು ವಿಷಾದದ ಭಾವನೆಗಲ್ಲಿ ಮುಳುಗಿದ್ದೀರಿ ಎಂದರ್ಥ. ಪರಿಸ್ಥಿತಿಯನ್ನು ಬದಲಾಯಿಸಲು ನೀವು ಶಕ್ತಿಹೀನರಾಗುವ ಅಥವಾ ವಿಫಲರಾಗಿರುವ ಸಾಧ್ಯತೆಯಿದೆ.
ಸತ್ತ ವ್ಯಕ್ತಿಗಳ ಜೊತೆ ಜಗಳವಾಡುವ ಕನಸು ಬಿದ್ದರೆ ಅದರಲ್ಲಿಯೂ ತಂದೆ ತಾಯಿಯ ಜೊತೆ ಜಗಳವಾಡಿದಂತೆ ಕಸನು ಬಿದ್ದರೆ ನಿಮಗೆ ನೀವು ಮಾಡಿದ ತಪ್ಪು ಅರಿವಾಗಿದೆ ಎಂದರ್ಥ. ಬಹಿರಂಗವಾಗಿ ಹೇಳಿಕೊಳ್ಳದೇ ಹೋದರೂ ತಪ್ಪು ಮಾಡಿದ್ದೀರಿ. ತಪ್ಪು ಒಪ್ಪಿಕೊಳ್ಳಲಾಗದೆ ಚಡಪಡಿಸುತ್ತಿದ್ದೀರಿ ಹಾಗೂ ಬಹಿರಂಗದಲ್ಲಿ ಸುಳ್ಳು ಹೇಳಿಕೊಂಡು ಬದುಕುತ್ತಿದ್ದೀರಿ ಎಂಬ ಸೂಚನೆ.
ಸತ್ತ ವ್ಯಕ್ತಿಯ ಅಳುವ ಕನಸಿನ ಚಿಹ್ನೆಯು ಮ್ಮ ಹತ್ತಿರವಿರುವ ಯಾರಾದರೂ ನಿಮ್ಮ ಜೀವನವನ್ನು ತ್ಯಜಿಸುವ ಅಥವಾ ಒಳ್ಳೆಯದಕ್ಕಾಗಿ ಬಿಡುವ ಬಗ್ಗೆ ಯೋಚಿಸುತ್ತಿರಬಹುದು ಎಂದು ಕನಸು ಹೇಳುತ್ತದೆ. ಸತ್ತ ವ್ಯಕ್ತಿಗೆ ಅಳುವುದು ಗಮನಾರ್ಹವಾದ ಭಾವನಾತ್ಮಕ ನಷ್ಟವನ್ನು ಸಂಕೇತಿಸುತ್ತದೆ.
ನಿಮ್ಮ ಸಂಬಂಧಿಕರು ಸತ್ತಿರುವುದನ್ನು ನೀವು ನೋಡುವ ಕನಸು, ಅವರು ನಿಜವಾಗಿಯೂ ಜೀವಂತವಾಗಿದ್ದರೆ ಅವರಿಗೆ ಅನೇಕ ವರ್ಷಗಳ ಸಮೃದ್ಧ ಆರೋಗ್ಯವನ್ನು ಸೂಚಿಸುತ್ತದೆ; ಅವರು ಈಗಾಗಲೇ ಸತ್ತಿದ್ದರೆ, ಅಂತಹ ಕನಸು ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. ಅಂದಹಾಗೆ ಇದರಲ್ಲಿ ಕೆಲವು ವಿಷಯಗಳನ್ನಷ್ಟೇ ನೀಡಲಾಗಿದೆ. ಜ್ಯೋತಿಷ್ಯಕ್ಕಿಂತ ಹೆಚ್ಚು ಮನೋವೈದ್ಯಕೀಯ ಶಾಸ್ತ್ರದ ಅಂಶಗಳನ್ನೇ ಹೆಚ್ಚು ನೀಡಲಾಗಿದೆ.



