ಇದೇ ನವೆಂಬರ್ 8 ರಂದು ಜರುಗುತ್ತಿರೋ ರಕ್ತ ಚಂದ್ರ ಗ್ರಹಣ ಭಾರತದಲ್ಲಿ ಸಂಭವಿಸುವಾಗ ಮಧ್ಯಾಹ್ನವಾಗಿರುತ್ತೆ. ವರ್ಷದ ಕಟ್ಟ ಕಡೆಯ ಚಂದ್ರ ಗ್ರಹಣಕ್ಕೆ ಕೌಂಟ್ಡೌನ್ ಶುರುವಾಗಿದೆ. ಅಕ್ಟೋಬರ್ 25ರ ಮಂಗಳವಾರದಂದು 2022ರ ಕಟ್ಟ ಕಡೆಯ ಸೂರ್ಯ ಗ್ರಹಣ ಗೋಚರವಾಗಿತ್ತು. ಈ ಸೂರ್ಯ ಗ್ರಹಣ ಸಂಭವಿಸಿದ 21ಸಾವಿರದ 600 ನಿಮಿಷಗಳ ನಂತರ, ಕರಾರುವಾಕ್ ಆಗಿ 15 ದಿನಗಳ ಬಳಿಕ, ಮಂಗಳವಾರವೇ ಚಂದ್ರ ಗ್ರಹಣ ಗೋಚರವಾಗ್ತಿದೆ. ಅದು ಮಂಗಳವಾರದ ಬ್ಲಡ್ ಮೂನ್. ರಕ್ತಚಂದ್ರ ಗ್ರಹಣ.
ಈ ಗ್ರಹಣ ಒಟ್ಟು 85 ನಿಮಿಷ ರಕ್ತ ಬಣ್ಣ ಅಂದರೆ ಸೆಕೆಂಡುಗಳಲ್ಲಿ ಹೇಳಬೇಕೆಂದರೆ 5,100 ಸೆಕೆಂಡ್ ಇರಲಿದೆ. ಚಂದ್ರ ಗ್ರಹಣ.. ಸೂರ್ಯ ಭೂಮಿ ಮತ್ತು ಚಂದ್ರ ಸಮ ರೇಖೆಯಲ್ಲಿ ಬಂದು ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಜರುಗುವಂತಹುದು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದು, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಕಡು ಕೆಂಪಾಗಿ ಕಾಣುವಂತೆ ಗೋಚರಿಸುತ್ತಾನೆ. ಹೀಗಾಗಿಯೇ ಇದನ್ನು ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಗ್ರಹಣ ಎನ್ನುತ್ತಾರೆ.
ಚಂದ್ರ ಗ್ರಹಣ ಸಮಯ
ದಿನಾಂಕ: ನವೆಂಬರ್ 8
ಸ್ಪರ್ಶಕಾಲ: ಮದ್ಯಾಹ್ನ 2.38
ಮಧ್ಯಕಾಲ: 4.29
ಮೋಕ್ಷಕಾಲ:6.19
ನಕ್ಷತ್ರ: ಭರಣಿ
ಚಂದ್ರ ಜನಿಸಿದ ದಿನವೇ ಚಂದ್ರನಿಗೆ ಗ್ರಹಣ. ಈ ಗ್ರಹಣ ಸಂಭವಿಸಿದ ದಿನವೇ ಚಂದ್ರನ ಜನ್ಮದಿನ ಎನ್ನುವುದು ವಿಶೇಷ. ಇದು ರಾಹುಗ್ರಸ್ತ ಗ್ರಹಣವೂ ಹೌದು. ಸೂರ್ಯಗ್ರಹಣ ಕೇತುಗ್ರಸ್ತವಾಗಿದ್ದರೆ, ಚಂದ್ರಗ್ರಹಣ ರಾಹುಗ್ರಸ್ತವಾಗಿದೆ. ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ.
ಮೇಷ ರಾಶಿಯಲ್ಲಿ ಗ್ರಹಣ ಸಂಭವಿಸಿದಾಗ ಪಾಂಚಾಲ ದೇಶ(ಪಂಜಾಬ್), ಕಳಿಂಗ(ಒಡಿಶಾ) ಶೂರಸೇನ(ಮಥುರಾ), ಕಾಂಬೋಜ, ಕಿರಾತ ದೇಶಗಳಿಗೆ ಸಂಕಷ್ಟ ತಲೆದೋರುವ ಸಂಭವವಿದೆ. ಶಸ್ತ್ರಾಸ್ತ್ರಗಳಿಂದ ಜೀವನ ಮಾಡುವ ಪೊಲೀಸರು, ಸೈನಿಕರು, ಅಗ್ನಿಯೊಂದಿಗೆ ಕೆಲಸ ಮಾಡುವ ಕಮ್ಮಾರ, ಅಕ್ಕಸಾಲಿಗ, ಅಡುಗೆ ಭಟ್ಟರು.. ಮೊದಲಾದವರು ತೊಂದರೆಗೆ ಗುರಿಯಾಗುತ್ತಾರೆ ಎನ್ನುತ್ತದೆ ಶಾಸ್ತ್ರ.
ಅಶ್ವಿನಿ, ಭರಣಿ, ಕೃತ್ತಿಕಾ, ಪುಬ್ಬ ಹಾಗೂ ಪೂರ್ವಾಷಾಢ ನಕ್ಷತ್ರಗಳಿಗೆ ಗ್ರಹಣ ದೋಷವಿರುತ್ತದೆ. ಕುಂಭ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಕರ್ಕಟಕ ಶುಭ ಫಲಗಳಿದ್ದರೆ, ಅಶುಭ ಫಲ ಕಾಣಿಸುತ್ತಿರೋದು ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ ಹಾಗೂ ಮಕರ ರಾಶಿಯವರಿಗೆ. ಮೀನ ರಾಶಿ, ತುಲಾ ರಾಶಿ, ಸಿಂಹ ರಾಶಿ ಹಾಗೂ ಧನಸ್ಸು ರಾಶಿಯವರಿಗೆ ಮಧ್ಯಮ ಫಲವಿದೆ.
ಭಾರತದಲ್ಲಿ ಗ್ರಹಣ ಸಮಯ
ಬೆಂಗಳೂರು : ಆರಂಭ: ಸಂಜೆ 5:53Pm ಮೋಕ್ಷಕಾಲ: 6.18Pm
ಕೋಲ್ಕತ್ತಾ: ಆರಂಭ: ಸಂಜೆ 4:54Pm ಮೋಕ್ಷಕಾಲ: 6.18Pm
ದೆಹಲಿ : ಆರಂಭ: ಸಂಜೆ 5:31Pm ಮೋಕ್ಷಕಾಲ: 6.18Pm
ಮುಂಬೈ : ಆರಂಭ: ಸಂಜೆ 6:03Pm ಮೋಕ್ಷಕಾಲ: 6.18Pm
ನಾಗ್ಪುರ: ಆರಂಭ : ಸಂಜೆ 5:32Pm ಮೋಕ್ಷಕಾಲ : 6:32Pm
ಶ್ರೀನಗರ: ಆರಂಭ ಳ ಸಂಜೆ 5:31Pm ಮೋಕ್ಷಕಾಲ :6. 31Pm



