ಗಾಯತ್ರಿ ಮಂತ್ರ ಎಂದರೆ ಗಾಯತ್ರಿ ದೇವಿಗೆ ಮಾತ್ರ ಎಂಬುದು ಗಾಯತ್ರಿ ಮಂತ್ರದ ಸಂಪೂರ್ಣ ವಿಷಯ ಗೊತ್ತಿಲ್ಲದವರ ನಂಬಿಕೆ. ಗಾಯತ್ರಿ ಮಂತ್ರವನ್ನು ಮಂತ್ರಗಳಲ್ಲೇ ಮಹಾಮಂತ್ರ ಎಂದು ಕರೆಯುತ್ತಾರೆ. ಎಲ್ಲಾ ಹಿಂದೂ ಧರ್ಮಗ್ರಂಥಗಳಲ್ಲಿ ಇದನ್ನು ಮೊದಲನೇ ಮಂತ್ರವೆಂದು ಪರಿಗಣಿಸುತ್ತಾರೆ. ಪ್ರಪಂಚದ ಮೊದಲ ಗ್ರಂಥವಾದ ಋಗ್ವೇದ ಶುರುವಾಗುವುದೇ ಗಾಯತ್ರಿ ಮಂತ್ರದಿಂದ. ನಾಲ್ಕು ವೇದಗಳನ್ನು ರಚಿಸುವ ಮೊದಲು ಬ್ರಹ್ಮನು 24 ಅಕ್ಷರಗಳ ಗಾಯತ್ರಿ ಮಂತ್ರವನ್ನು ರಚಿಸಿದನು ಎನ್ನುವುದು ನಂಬಿಕೆ.
ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದಗಳ ಮಂತ್ರ. ಇದು ಒಟ್ಟು 24 ಅಕ್ಷರಗಳ ಛಂದಸ್ಸು. ಈ ಛಂದಸ್ಸಿನಲ್ಲಿ ರಚನೆಗೊಂಡ ವಿವಿಧ ದೇವತೆಗಳ ಸ್ತುತಿ ಆಯಾ ದೇವತೆಗಳ ಗಾಯತ್ರಿ ಮಂತ್ರವೆಂದು ಕರೆಯಲ್ಪಡುತ್ತದೆ. ಈ 32 ಗಾಯತ್ರಿ ಮಂತ್ರಗಳಲ್ಲಿ ನವಗ್ರಹಗಳೂ ಇವೆ. ನವಗ್ರಹಗಳಷ್ಟೇ ಅಲ್ಲದೆ ಗಣೇಶ, ಶಿವ, ದುರ್ಗೆ, ಶ್ರೀರಾಮ, ಸೀತೆ, ಇಂದ್ರ, ಅಗ್ನಿ, ವರುಣ, ವಾಯು, ಆಂಜನೇಯ, ಹಯಗ್ರೀವ, ಯಮ, ಸರಸ್ವತಿ, ಬ್ರಹ್ಮ, ಶ್ರೀಕೃಷ್ಣ, ನಾರಾಯಣ, ಭೂಮಿ, ವಾಸವಿ, ಕಾತ್ಯಾಯಿನಿ, ತುಳಸಿ.. ಹೀಗೆ ಒಟ್ಟು 32 ದೇವತೆಗಳ ವಿವಿಧ ಗಾಯತ್ರಿ ಮಂತ್ರಗಳಿವೆ.

ಗಾಯತ್ರಿ ದೇವಿ ಮಂತ್ರ
ಓಂ ಭೂರ್ಭುವಃ ಸ್ವಃ
ತತ್ಸರ್ವಿತುರ್ವರೇಣ್ಯಂ
ಭರ್ಗೋದೇವಸ್ಯ ಧೀಮಹಿ
ಧಿಯೋ ಯೋನಃ ಪ್ರಚೋದಯಾತ್
ಗಣೇಶ ಗಾಯತ್ರಿ ಮಂತ್ರ
ಓಂ ಲಂಬೋದರಾಯ ವಿದ್ಮಹೇ
ಮಹೋದರಾಯ ಧೀಮಹೀ
ತನ್ನೋ ದಂತಿ ಪ್ರಚೋದಯಾತ್
ಸೂರ್ಯ ಗಾಯತ್ರಿ ಮಂತ್ರ
ಓಂ ಭಾಸ್ಕರಾಯ ವಿದ್ಮಹೇ
ದಿವಾಕರಾಯ ಧೀಮಹಿ
ತನ್ನೋ ಸೂರ್ಯ ಪ್ರಚೋದಯಾತ್
ಚಂದ್ರ ಗಾಯತ್ರಿ ಮಂತ್ರ
ಓಂ ಕೃಷ್ಣ ಪುತ್ರಾಯ ವಿದ್ಮಹೇ
ಅಮೃತದ್ವಾಯ ಧೀಮಹಿ
ತನ್ನೋ ಚಂದ್ರ ಪ್ರಚೋದಯಾತ್
ಅಂಗಾರಕಗಾಯತ್ರಿ ಮಂತ್ರ
ಓಂ ಅಂಗಾರಕಾಯ ವಿದ್ಮಹೇ
ಶಕ್ತಿ ಹಸ್ತಾಯ ಧೀಮಹಿ
ತನ್ನೋ ಕುಜ ಪ್ರಚೋದಯಾತ್
ಬುಧ ಗಾಯತ್ರಿ ಮಂತ್ರ
ಓಂ ಗಜಧ್ವಜಾಯ ವಿದ್ಮಹೇ
ಸುಖ ಹಸ್ತಾಯ ಧೀಮಹಿ
ತನ್ನೋ ಬುಧ ಪ್ರಚೋದಯಾತ್
ಗುರು ಗಾಯತ್ರಿ ಮಂತ್ರ
ಓಂ ಸುರಾಚಾರ್ಯಾಯ ವಿದ್ಮಹೇ
ದೇವ ಪೂಜ್ಯಾಯ ಧೀಮಹಿ
ತನ್ನೋ ಗುರು ಪ್ರಚೋದಯಾತ್
ಶುಕ್ರ ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ದೈತ್ಯಾಚಾರ್ಯಾಯ ಧೀಮಹಿ
ತನ್ನೋ ಶುಕ್ರ ಪ್ರಚೋದಯಾತ್
ಶನಿ ಗಾಯತ್ರಿ ಮಂತ್ರ
ಓಂ ಕಾಕಧ್ವಜಾಯ ವಿದ್ಮಹೇ
ಖಡ್ಗ ಹಸ್ತಾಯ ಧೀಮಹಿ
ತನ್ನೋ ಶನಿ ಪ್ರಚೋದಯಾತ್
ರಾಹು ಗಾಯತ್ರಿ ಮಂತ್ರ
ಓಂ ನಾಗಧ್ವಜಾಯ ವಿದ್ಮಹೇ
ಪದ್ಮಹಸ್ತಾಯ ಧೀಮಹಿ
ತನ್ನೋ ರಾಹು ಪ್ರಚೋದಯಾತ್
ಕೇತು ಗಾಯತ್ರಿ ಮಂತ್ರ
ಓಂ ಅಶ್ವಧ್ವಜಾಯ ವಿದ್ಮಹೇ
ಶೂಲಹಸ್ತಾಯ ಧೀಮಹಿ
ತನ್ನೋ ಕೇತು ಪ್ರಚೋದಯಾತ್
ಅಗ್ನಿ ಗಾಯತ್ರಿ ಮಂತ್ರ
ಓಂ ಮಹಾಜ್ವಾಲಾಯ ವಿದ್ಮಹೇ
ಅಗ್ನಿದೇವಾಯ ಧೀಮಹೀ
ತನ್ನೋ ಅಗ್ನಿ ಪ್ರಚೋದಯಾತ್
ಬ್ರಹ್ಮ ಗಾಯತ್ರಿ ಮಂತ್ರ
ಓಂ ಚತುರ್ಮುಖಾಯ ವಿದ್ಮಹೇ
ಹಂಸಾರೂಢಾಯ ಧೀಮಹೀ
ತನ್ನೋ ಬ್ರಹ್ಮ ಪ್ರಚೋದಯಾತ್
ದುರ್ಗಾ ಗಾಯತ್ರಿ ಮಂತ್ರ
ಓಂ ಕಾತ್ಯಾಯನಾಯ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹೀ
ತನ್ನೋ ದುರ್ಗಾ ಪ್ರಚೋದಯಾತ್
ವಾಸವಿ ಗಾಯತ್ರಿ ಮಂತ್ರ
ಓಂ ಕುಸುಮ ಪುತ್ರೀಚ ವಿದ್ಮಹೇ
ಕನ್ಯಾಕುಮಾರೀ ಚ ಧೀಮಹಿ
ತನ್ನೋ ವಾಸವಿ ಪ್ರಚೋದಯಾತ್
ಹಯಗ್ರೀವ ಗಾಯತ್ರಿ ಮಂತ್ರ
ಓಂ ವಾಣಿಸ್ವರಾಯ ವಿದ್ಮಹೇ
ಹಯಗ್ರೀವಾಯ ಧೀಮಹೀ
ತನ್ನೋ ಹಯಗ್ರೀವ ಪ್ರಚೋದಯಾತ್
ಶ್ರೀ ಕೃಷ್ಣ ಗಾಯತ್ರಿ ಮಂತ್ರ
ಓಂ ದಾಮೋದರಾಯ ವಿದ್ಮಹೇ
ರುಕ್ಮಿಣಿ ವಲ್ಲಭಾಯ ಧೀಮಹೀ
ತನ್ನೋ ಕೃಷ್ಣ ಪ್ರಚೋದಯಾತ್
ನರಸಿಂಹ ಗಾಯತ್ರಿ ಮಂತ್ರ
ಓಂ ನರಸಿಂಹಾಯ ವಿದ್ಮಹೇ
ವಜ್ರನಖಾಯ ಧೀಮಹೀ
ತನ್ನೋ ನರಸಿಂಹ ಪ್ರಚೋದಯಾತ್
ನಾರಾಯಣ ಗಾಯತ್ರಿ ಮಂತ್ರ
ಓಂ ನಾರಾಯಣಾಯ ವಿದ್ಮಹೇ
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್
ಪೃಥ್ವಿ ಗಾಯತ್ರಿ ಮಂತ್ರ
ಓಂ ಪೃಥ್ವಿದೇವಾಯ ವಿದ್ಮಹೇ
ಸಹಸ್ರ ಮೂರ್ತಯೇಚ ಧೀಮಹೀ
ತನ್ನೋ ಪೃಥ್ವಿ ಪ್ರಚೋದಯಾತ್
ಶ್ರೀ ರಾಮ ಗಾಯತ್ರಿ ಮಂತ್ರ
ಓಂ ದಶರಥಾಯ ವಿದ್ಮಹೇ
ಸೀತಾವಲ್ಲಭಾಯ ಧೀಮಹೀ
ತನ್ನೋ ರಾಮ ಪ್ರಚೋದಯಾತ್
ಆಂಜನೇಯ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ
ವಾಯುಪುತ್ರಾಯ ಧೀಮಹಿ
ತನ್ನೋ ಹನುಮಾನ್ ಪ್ರಚೋದಯಾತ್
ಇಂದ್ರದೇವ ಗಾಯತ್ರಿ ಮಂತ್ರ
ಓಂ ದೇವರಾಜಾಯ ವಿದ್ಮಹೇ
ವಜ್ರ ಹಸ್ತಾಯ ಧೀಮಹಿ
ತನ್ನೋ ಇಂದ್ರ ಪ್ರಚೋದಯಾತ್
ಮಾತೆ ಸರಸ್ವತಿ ಗಾಯತ್ರಿ ಮಂತ್ರ
ಓಂ ವಾಗ್ದೇವಿಯೈಚ ವಿದ್ಮಹೇ
ವಿರಿಂಜಿ ಪತ್ನಿಯೈಚ ಧೀಮಹೀ
ತನ್ನೋ ವಾಣಿ ಪ್ರಚೋದಯಾತ್
ಸೀತಾಮಾತೆ ಗಾಯತ್ರಿ ಮಂತ್ರ
ಓಂ ಜಾನಕಿನಂದಿನ್ಯೆ ವಿದ್ಮಹೇ
ಭೂಮಿಜಾಯೈ ಧೀಮಹೀ
ತನ್ನೋ ಸೀತಾ ಪ್ರಚೋದಯಾತ್
ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹೀ
ತನ್ನೋ ರುದ್ರ ಪ್ರಚೋದಯಾತ್
ಸುದರ್ಶನ ಗಾಯತ್ರಿ ಮಂತ್ರ
ಓಂ ಸುದರ್ಶನಾಯ ವಿದ್ಮಹೇ
ಮಹಾಜ್ವಾಲಾಯ ಧೀಮಹೀ
ತನ್ನೋ ಚಕ್ರ ಪ್ರಚೋದಯಾತ್
ತುಳಸಿದೇವಿ ಗಾಯತ್ರಿ ಮಂತ್ರ
ಓಂ ತುಳಸೀ ದೇವ್ಯಾಯೈಚ ವಿದ್ಮಹೇ
ವಿಷ್ಣುಪ್ರಿಯಾಯೈಚ ಧೀಮಹೀ
ತನ್ನೋ ಬೃಂದ ಪ್ರಚೋದಯಾತ್
ವರುಣ ದೇವ ಗಾಯತ್ರಿ ಮಂತ್ರ
ಓಂ ಜಲಬಿಂಬಾಯ ವಿದ್ಮಹೇ
ನೀಲಪುರುಷಾಯ ಧೀಮಹೀ
ತನ್ನೋ ವರುಣ ಪ್ರಚೋದಯಾತ್
ವೆಂಕಟೇಶ್ವರ ಸ್ವಾಮಿ ಗಾಯತ್ರಿ ಮಂತ್ರ
ಓಂ ನಿರಂಜನಾಯ ವಿದ್ಮಹೇ
ನಿರಾಭಾಸಾಯ ಧೀಮಹೀ
ತನ್ನೋ ಶ್ರೀನಿವಾಸ ಪ್ರಚೋದಯಾತ್
ಯಮಧರ್ಮ ಗಾಯತ್ರಿ ಮಂತ್ರ
ಓಂ ಸೂರ್ಯಪುತ್ರಾಯ ವಿದ್ಮಹೇ
ಮಹಾಕಾಲಾಯ ಧೀಮಹೀ
ತನ್ನೋ ಯಮ ಪ್ರಚೋದಯಾತ್
ಕುಬೇರ ಗಾಯತ್ರಿ ಮಂತ್ರ
ಓಂ ಯಕ್ಷರಾಜಾಯ ವಿದ್ಮಹೇ
ವೈಶ್ರಾವನಾಯ ಧೀಮಹಿ
ತನ್ನೋ ಕುಬೇರ ಪ್ರಚೋದಯಾತ್



